ಮೂಡಲಗಿ

ಕಲ್ಲೋಳಿ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ

ಕಲ್ಲೋಳಿ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ

ಲೋಕದರ್ಶನ ವರದಿ

ಮೂಡಲಗಿ 25: ತಾಲೂಕಿನ ಕಲ್ಲೋಳಿ ಪಟ್ಟಣದ ಯಲ್ಲಾಲಿಂಗೇಶ್ವರ ಮಠದಲ್ಲಿ  ನವರಾತ್ರಿಯ ಅಂಗವಾಗಿ ಪ್ರತಿಷ್ಠಾಪಿಸಿದ ಶ್ರೀದೇವಿಗೆ ನವರಾತ್ರಿ ಎಂಟನೇ ದಿನದಂದು ಮಹಿಳೆಯರಿಂದ ಕುಂಕುಮಾರ್ಚನೆ ಹಾಗೂ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮ ಗುರುಸಿದ್ದಯ್ಯಾ ಹಿರೇಮಠ, ಮೃತ್ಯುಂಜಯ್ಯ ಹಿರೇಮಠ ಅವರಿಂದ ಜರುಗಿತು.  

    ನಂತರ ಕಲ್ಲೋಳಿ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಯಲ್ಲಾಲಿಂಗೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಅವರು ಸಾನ್ನಿಧ್ಯದಲ್ಲಿ ವಾದ್ಯಮೇಳದೊಂದಿಗೆ ಪಟ್ಟಣ ಅಪಾರ ಜನಸ್ತೋಮದೊಂದಿಗೆ ತೆರಳಿ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ  ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು. 

  ಮಂಜುಳಾ ಹಿರೇಮಠ, ತೇಜಶ್ವಿನಿ ಕಪ್ಪಲಗುದ್ದಿ, ಅಣ್ಣಪೂರ್ಣಾ  ಖಾನಗೌಡ್ರ, ಗಂಗೂಬಾಯಿ ಬೆಳಕೂಡ, ಲಕ್ಷ್ಮೀ ಪಾಟೀಲ, ಕಲ್ಲವ್ವ ನೆರ್ಲಿ , ಶಾಂತಾ ಕಂಕಣವಾಡಿ, ಗೀತಾ ದಬಾಡಿ, ಶೋಭಾ ದಬಾಡಿ ಸೇರಿದಂತೆ ನೂರಾರು ಮಹಿಳೇಯರು ಭಾಗವಹಿಸಿದರು. 

 ಮಲ್ಲಯ್ಯಾ ಮಠಪತಿ ಸ್ವಾಗತಿಸಿದರು, ಅಜರ್ುನ ಚಿಕ್ಕೋಡಿ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ