ಕುಲಗೋಡ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆಯುಷ್ಮಾನಭವ ಅಭಿಯಾನ
ಲೋಕದರ್ಶನ ವರದಿ
ಮೂಡಲಗಿ 13: ಈ ಮಹಾನ ಯೋಜನೆ ಪ್ರತಿ ಮನೆ ಕುಟುಂಬದ ಆರೋಗ್ಯ ಸಹಾಯಕ ಮತ್ತು ಜನಜಾಗೃತಿ ಮೂಡಿಸುವ ಆಯುಷ್ಮಾನಭವವಾಗಿದೆ ಎಂದು ಪ್ರಾ.ಆ.ಕೇಂ ವೈಧ್ಯ ಮಹೇಶ ಕಂಕಣವಾಡಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆಯುಷ್ಮಾನಭವ ಅಭಿಯಾನದಲ್ಲಿ ಮಾತನಾಡಿ ಜನರಿಗೆ ಉಚಿತ ಮತ್ತು ಖಚಿತ ಆರೋಗ್ಯಕ್ಕೆ ದಾರಿಯಾಗಿದೆ. ಬರುವ ದಿನಗಳಲ್ಲಿ ಕುಲಗೋಡ ಆಸ್ಪತ್ರೆ ತಾಲೂಕಿಗೆ ಮಾದರಿಯಾಗುವದು ಎಂದರು.
ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ ಮಾತನಾಡಿ ಪ್ರಾ ಆ ಕೇಂದ್ರ ಅಭಿವೃದ್ದಿಗೆ ಗ್ರಾಪಂ ನೆರವಗಲಿದೆ. ಸೇವೆ ನಿಮ್ಮದ್ದು ಸಹಾಯ ನಮ್ಮದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಮಾಜಿ ಗ್ರಾಪಂ ಉಪಧ್ಯಕ್ಷ ಶ್ರೀಪತಿ ಗಣಿ. ಸೋಮಲಿಂಗ ಮಿಕಲಿ. ಲಕ್ಷ್ಮಣ ನಂದಿ ಹಾಗೂ ಪ್ರಾ.ಆ ಕೇಂದ್ರದ ಸರ್ವ ಸಿಬ್ಬಂದಿ ಹಾಗೂ ಆಶಾ ಕಾರ್ಯಕತರ್ೆಯರು ಇದ್ದರು