ಮೂಡಲಗಿ

ಎಂಇಎಸ್ ನಿಷೇಧಿಸಲು ಒತ್ತಾಯಿಸಿ, ಕರವೇ ಮನವಿ

ಎಂಇಎಸ್ ನಿಷೇಧಿಸಲು ಒತ್ತಾಯಿಸಿ, ಕರವೇ ಮನವಿ

ಲೋಕದರ್ಶನ ವರದಿ

ಮೂಡಲಗಿ 29: ಕನರ್ಾಟಕದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಮಂಗಳವಾರದಂದು ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ ಶಿವಾನಂದ ಬಬಲಿ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

ಮೂಡಲಗಿ ತಾಲೂಕಾ ಕರವೇ ಅಧ್ಯಕ್ಷ ಬಸವರಾಜ ಹುಲಕುಂಡ ಮಾತನಾಡಿ, ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಮಹಾರಾಷ್ಟ್ರ ರಾಜಕಾರಣಿಗಳು, ಅಲ್ಲಿನ ಸಕರ್ಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣ ನಿಮರ್ಾಣವಾಗುವಂತೆ ಕೃತ್ಯಗಳನ್ನು ಮಾಡುತ್ತಾ ಬಂದಿದೆ. ಆದರಿಂದ ಶೀಘ್ರವಾಗಿ ರಾಜ್ಯ ಸಕರ್ಾರ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿದರು.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಬೇಡಿಕೆಯಲ್ಲಿ ಯಾವು ಅರ್ಥವೂ ಇಲ್ಲ, ಅದು ಕನ್ನಡಿಗರ ನೆಲ. ಬೆಳಗಾವಿ ನೆಲದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಮಾಹಾ ನಾಯಕರು ಹುಟ್ಟಿ ಬೆಳದ ನೆಲವಾಗಿ ಬ್ರಿಟೀಷರ ವಿರುದ್ದ ಹೋರಾಡಿದ ಪುಣ್ಯ ಭೂಮಿ ನಮ್ಮ ಬೆಳಗಾವಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಸಂಚಾಲಕ ರಮೇಶ ರಾಮಗಟ್ಟಿ, ಪದಾಧಿಕಾರಿಗಳಾದ ಗುರುನಾಥ ಬೂಜ, ದುಂಡಪ್ಪ ಪಾಟೀಲ, ಬಾಳಪ್ಪ ಗ್ಯಾನಪ್ಪನ್ನವರ, ಮಹಾದೇವ ಹುಚ್ಚನ್ನವರ, ಕೃಷ್ಣಾ ತೋಟಗಿ, ಮಲ್ಲಪ್ಪ ಹುಚ್ಚನ್ನವರ, ಲಕ್ಷಣ ಹೂಲಿಕಟ್ಟಿ, ವಿಠ್ಠಲ ಕಂಕಣವಾಡಿ, ತುಕಾರಾಮ ಪಕ್ಕೆನ್ನವರ, ಯಮನಪ್ಪ ಮ್ಯಾಗೇರಿ, ದುಂಡಪ್ಪ ನಾಯಕ, ಹಾಗೂ ಅನೇಕರು ಮಹಿಳೆಯರು ಉಪಸ್ಥಿತರಿದ್ದರು 

ಸುದ್ದಿ ಓದಿ