ಕರಾವಳಿ ಉತ್ಸವ ಆರನೇ ದಿನ: ಮಿಂಚಿದ ಗಾಯಕ ಮಹಮ್ಮದ್ ದಾನಿಷ್
Karavali Utsav Day 6: Singer Mohammed Danish shines
ಕಾರವಾರ 28: ಕರಾವಳಿ ಉತ್ಸವ ಆರನೇ ದಿನ ಪ್ರಸಿದ್ದ ಗಾಯಕ ಮಹಮ್ಮದ್ ದಾನಿಷ್ ಸೂಫಿ ಹಾಡು ಹಾಗೂ ಕವ್ವಾಲಿ ಮಾದರಿಯ ಹಾಡುಗಳನ್ನು ಹಾಡಿ ಮಿಂಚಿದರು. ಅಪ್ಪಟ ಹಿಂದೂಸ್ತಾನಿ ಪ್ರತಿಭೆಯಾದ ದಾನಿಷ್ ಹಿಂದೂಸ್ತಾನಿ ಸಂಗೀತದ ಮಹತ್ವವನ್ನು ಹಾಡುಗಳ ಮೂಲಕ ಸಾರಿದರು. ಮೊಘಲ್ ಮತ್ತು ಸುಲ್ತಾನರ ಕಾಲದ ಹಿಂದೂಸ್ತಾನಿ ಸಂಗೀತದ ಸುಧೆಗೆ ಅವರು ಪ್ರೇಕ್ಷಕರನ್ನು ಕರೆದೊಯ್ದರು. ಕರಾವಳಿ ಉತ್ಸವದಲ್ಲಿ ಎಲ್ಲಾ ದಿನಗಳ ಸಂಗೀತ ಕಾರ್ಯಕ್ರಮಕ್ಕಿಂತ ಐದನೇ ದಿನ ಯುವಕ ಯುವತಿಯರ ಉತ್ಸಾಹ ನೂರ್ಮಡಿಸಿತ್ತು. ಸಾಗರದಂತಿದ್ದ ಜನ ಸಮೂಹ ಕಂಡು ಗಾಯಕ ದಾನಿಷ್ ಅತ್ಯುತ್ಸಾಹದಲ್ಲಿ ಹಾಡುಗಳನ್ನು ಹಾಡಿದರು. ಹಾಡಿನ ಜೊತೆಗೆ ಅವರ ನೃತ್ಯ ಹಾಗೂ ಭಾವಾಭಿನಯ ಯುವತಿಯರ ಮನ ಕದಿಯಿತು. ಲಗನ್ ಲಗೀ, ಆಖೀರ್ ತಬ್ ಅಪ್ನೆ, ಅಪ್ನೆ ತೋ ಅಪ್ನೆ ಹೋತಾ ಹೈ , ದಿಲ್ ಜೋ ಮಿಲೇ ಮಿಲೇಯಿ ರಹೇ, ಆಕೀರ್ ಫಿರ್ ಆನಾ ಹೈ, ಹೋಜಾಯಿಗಾ ಬಲ್ಲೆ ಬಲ್ಲೆ.. ಹಾಡುಗಳನ್ನು ಹಾಡಿ ರಂಜಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 