ಹುಕ್ಕೇರಿ

ಕನ್ನಡ ಭಾಷೆ ಮರೆಮಾಚುತ್ತಿದೆ ಆಂಗ್ಲ ಭಾಷೆಗೆ ಒತ್ತು ನೀಡಬೇಡಿ : ಹಿರೇಮಠ್

ಕನ್ನಡ ಭಾಷೆ ಮರೆಮಾಚುತ್ತಿದೆ ಆಂಗ್ಲ ಭಾಷೆಗೆ ಒತ್ತು ನೀಡಬೇಡಿ : ಹಿರೇಮಠ್

ಕನ್ನಡ ಭಾಷೆ ಮರೆಮಾಚುತ್ತಿದೆ ಆಂಗ್ಲ ಭಾಷೆಗೆ ಒತ್ತು ನೀಡಬೇಡಿ : ಹಿರೇಮಠ್

ಹುಕ್ಕೇರಿ 03:  ನೀರ್ಲಿ ಗ್ರಾಮದಲ್ಲಿ  ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಮೂಲ ಪರಿಕಲ್ಪನೆ ಮಾನಸಿಕ ಮತ್ತು ದೈಹಿಕವಾಗಿ ಕುಂಠಿತವಾಗುತ್ತಿದೆ.  ಕಾರಣ ಮಾತೃ ಭಾಷೆಯಲ್ಲಿ  ಶಿಕ್ಷಣ ನಿಡುವುದರಿಂದ ಮಗುವಿನಲ್ಲಿ ಶೈಕ್ಷಣಿಕ ಬೆಳವಣಿಗೆ ಯಶಸ್ವಿಗೊಳ್ಳುತ್ತದೆ. ಆದ್ದರಿಂದ ಮೊದಲು ಪಾಲಕರಲ್ಲಿ ಮಾತೃಭಾಷೆ ಶಿಕ್ಷಣದ ಅರಿವು ಮೂಡಿಸಬೇಕಾಗಿದೆ. ಎಂದು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ಹೇಳಿದರು.     

 ತಾಲೂಕಿನ ನೇರಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳು ಉಳಿದರೆ ಗ್ರಾಮೀಣ ಭಾಗದ ಸೊಗಡು ಉಳಿಯುತ್ತದೆ.ಈ ನಿಟ್ಟಿನಲ್ಲಿ ಭವ್ಯ ಭಾರತ ಸೊಗಡನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಲಿಕ್ಕೆ ಕನ್ನಡ ಭಾಷೆ ಅತಿ ಅವಶ್ಯವಾಗಿದೆ. ಎಂದು ಹೆಳಿದರು. ಪ್ರೌಢ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲೇಶ ಜಾಧವ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಚಿದಾನಂದ ದೇಸಾಯಿ, ಪಿಡಿಒ ಸಂಜಯ್ ಹೊಸಮನಿ ಉಪಸ್ಥಿತಿಯಲ್ಲಿ ಶಿಕ್ಷಕರಾದ ಶ್ರೀಶೈಲ್ ಮನುಗುತ್ತಿ ಕರ್ನಾಟಕ ಏಕೀಕರಣದ ಬಗ್ಗೆ ಮಕ್ಕಳಿಗೆ ವಿವರಣೆ ನೀಡಿದರು. ಶಿಕ್ಷಕರಾದ ರಾಜೇಂದ್ರ ನಡುಮನಿ ಕಾರ್ಯಕ್ರಮ ನಿರೂಪಿಸಿದರು, ಜಯಶ್ರೀ ಕುಲಕರ್ಣಿ ವಂದಿಸಿದರು. ನಂತರ 50 ಮೀಟರ್ ಉದ್ದದ ಕನ್ನಡ ದ್ವಜ ತಯಾರಿಸಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕನ್ನಡ ಮಾತೆಯ  ಜೈ ಘೋಷಗಳೊಂದಿಗೆ, ನೇರಲಿ ಗ್ರಾಮದ ಪ್ರಮುಖಬೀದಿಗಳಲ್ಲಿ ಮಕ್ಕಳು ಸಂಚರಿಸಿದರು.  ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಮತ್ತು ಸಿಬ್ಬಂದಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ