ಅಂತರರಾಷ್ಟ್ರೀಯ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿಮಾನ ತುರ್ತು ಭೂಸ್ಪರ್ಶ

ಅಮೆರಿಕ  ಉಪಾಧ್ಯಕ್ಷೆ  ಕಮಲಾ ಹ್ಯಾರಿಸ್  ವಿಮಾನ  ತುರ್ತು  ಭೂಸ್ಪರ್ಶ

ವಾಷಿಂಗ್ಟನ್, ಜೂನ್ 7 : ಅಮೆರಿಕದ  ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಯಾಣಿಸುತ್ತಿದ್ದ ವಿಮಾನವು  ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತಾಗಿ ಭೂಸ್ಪರ್ಶ ಮಾಡಿದೆ . ಕಮಲಾ ಹ್ಯಾರಿಸ್ ಗ್ವಾಟೆಮಾಲಾಕ್ಕೆ ಹೊರಟಿದ್ದರು. ಆದರೆ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಲ್ಲಿ ಇಳಿಯಬೇಕಾಯಿತು. ಆದರೆ ಕಮಲಾ ಹ್ಯಾರಿಸ್, ತಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ. ವಾಷಿಂಗ್ಟನ್ ಹೊರವಲದಲ್ಲಿರುವ ಜಾಯಿಂಟ್ ಬೇಸ್ ಆಂಡ್ರ್ಯೂಸ್ನಲ್ಲಿ 'ಏರ್ ಫೋರ್ಸ್ ಟು' ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ನಂತರ ಬೇರೆ  ವಿಮಾನದ ಮೂಲಕ ಕಮಲಾ ಹ್ಯಾರಿಸ್, ಪ್ರಯಾಣ ಬೆಳೆಸಿದರು ಎಂದೂ   ವರದಿಯಾಗಿದೆ ವಿಮಾನದ ಲ್ಯಾಂಡಿಂಗ್ ಗೇರ್ನಿಂದ ವಿಚಿತ್ರ ಶಬ್ದ ಕೇಳಿ ಬಂದಿದೆ  ಈ ಹಿನ್ನೆಲೆಯಲ್ಲಿ  ವಿಮಾನ ತುರ್ತು ಭೂಸ್ಪರ್ಶ ಮಾಡಿತು ಎಂದು ಕಮಲಾ ಜೊತೆಯಲ್ಲಿದ್ದ ಪತ್ರಕರ್ತರೊಬ್ಬರು ಹೇಳಿದರು ಎನ್ನಲಾಗಿದೆ. 


ಸುದ್ದಿ ಓದಿ