ಅಂತರರಾಷ್ಟ್ರೀಯ

ಜಪಾನ್: ಕರೋನಾ ಹಾಟ್ಸ್ಪಾಟ್ ಗಳಲ್ಲಿ ತುರ್ತು ಪರಿಸ್ಥಿತಿ ಸಾಧ್ಯತೆ

ಜಪಾನ್: ಕರೋನಾ ಹಾಟ್ಸ್ಪಾಟ್ ಗಳಲ್ಲಿ  ತುರ್ತು ಪರಿಸ್ಥಿತಿ ಸಾಧ್ಯತೆ

ಟೋಕಿಯೊ, ಜನವರಿ 5 : ಕರೋನ ಸೋಂಕು ವೇಗವಾಗಿ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ, ಟೋಕಿಯೊ ಮತ್ತು ಮೂರು ನೆರೆಯ ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಜಪಾನ್ ಸರ್ಕಾರ ಗಂಬೀರ ಚಿಂತನೆ ಮಾಡಿದೆ. ಪರಿಣಾಮ  ಟೋಕಿಯೊ ಮತ್ತು ಸೈತಮಾ, ಚಿಬಾ ಮತ್ತು ಕನಗಾವಾ ಪ್ರಾಂತ್ಯಗಳಲ್ಲಿ ಸರ್ಕಾರವು ತುರ್ತು ಪರಿಸ್ಥಿತಿಯನ್ನು ವಿಧಿಸುವ ಸಾಧ್ಯತೆಯಿದೆ ಎಂದು ಜಪಾನ್ ಪ್ರಧಾನಿ ಸುಗಾ ಯೋಶಿಹಿಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಹೊಸ ವರ್ಷದ ಮೊದಲ ಮೂರು ದಿನಗಳಲ್ಲಿ ಈ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳು  ವರದಿಯಾಗಿರುವುದರಿಂದ  ಸಾರ್ವಜನಿಕರಿಗೆ ಬಲವಾದ ಸಂದೇಶವನ್ನು ಕಳುಹಿಸಬೇಕಾಗಿದೆ ಎಂದು ಸುಗಾ ಅಭಿಪ್ರಾಯಪಟ್ಟರು. ವಾಸ್ತವವಾಗಿ ಈ ಪ್ರದೇಶಗಳು ದಾಖಲಾದ ರಾಷ್ಟ್ರೀಯ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಭಾಗವನ್ನು ಹೊಂದಿವೆ. ತುರ್ತು ಪರಿಸ್ಥಿತಿ ಸುಮಾರು ಒಂದು ತಿಂಗಳವರೆಗೆ ಜಾರಿಯಲ್ಲಿರುವ ಸಾಧ್ಯತೆಯಿದೆ. ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕನಿಷ್ಠ ಪ್ರಮಾಣದಲ್ಲಿ ಮಾತ್ರ  ಅಡ್ಡಿ ಉಂಟಾಗುವಂತೆ ತುರ್ತು ಕ್ರಮಗಳನ್ನು ಕೇಂದ್ರೀಕೃತ ರೀತಿಯಲ್ಲಿ ಜಾರಿಗೊಳಿಸಲಾಗುವುದು ಎಂದೂ ಪ್ರಧಾನಿ ಸುಗಾ ಹೇಳಿದರು. 



ಸುದ್ದಿ ಓದಿ