ಸ್ವಾತಂತ್ರ್ಯ ಸಂಗ್ರಾಮ ನೆನಹು ಕಾರ್ಯಕ್ರಮ
ಲೋಕದರ್ಶನ ವರದಿ
ಮುಂಡರಗಿ 21: ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ದೇಶವನ್ನು ರಕ್ಷಣೆ ಮಾಡಿದ ಹೋರಾಟಗಾರರು ಅಮರರಾಗಿದ್ದಾರೆ. ಆ ಅಮರ ವೀರರ ತ್ಯಾಗ-ಬಲಿದಾನಗಳಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರ ಸ್ಮರಣೆ ಅವಶ್ಯ ಎಂದು ಸಾಮಾಜಿಕ ಕಾರ್ಯಕರ್ತ ಗೋಣಿಬಸಪ್ಪ ಕೋರ್ಲಹಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಡಂಬಳ ಗ್ರಾಮದ ಜ.ತೋಂಟದಾರ್ಯ ಪ.ಪೂ.ಮಹಾವಿದ್ಯಾಲಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಜ.ತೋಂಟದಾರ್ಯ ಪ.ಪೂ.ಮಹಾವಿದ್ಯಾಲಯದ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನೆನಹು ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಡಂಬಳದ ಶ್ರೀನಿವಾಸ ವೆಂಕಟಾದ್ರಿ ದೇಸಾಯಿಯವರ ಕುರಿತು ಅವರು ಉಪನ್ಯಾಸ ನೀಡಿದರು.
ಬಾದಾಮಿಯ ಚಾಲುಕ್ಯರು, ವಿಜಯನಗರ ಅರಸರು, ಬಿಜಾಪೂರದ ಆದಿಲ್ಶಾಹಿಗಳು, ಸವಣೂರಿನ ನವಾಬರು, ಮೈಸೂರಿನ ಟಿಪ್ಪು ಸುಲ್ತಾನ, ಬ್ರೀಟೀಷರು, ಪೂರ್ತಗೀಸರು, ಹಲವು ಪಾಳೇಯಗಾರರು ಡಂಬಳವನ್ನು ಕೇಂದ್ರವಾಗಿ ಇಟ್ಟುಕೊಂಡು ಆಡಳಿತವನ್ನು ನಡೆಸಿದ್ದಾರೆ. ಇಂತಹ ಐತಿಹಾಸಿಕ ಪಟ್ಟಣವಾಗಿದ್ದ ಡಂಬಳ ಗ್ರಾಮವು ಶಾತವಾಹನರ ಕಾಲದಿಂದಲೂ ಐತಿಹಾಸಿಕವಾಗಿ ಗುರುತಿಸಲ್ಪಟ್ಟಿರುವ ಗ್ರಾಮವಾಗಿದೆ. ಬೌಧ್ದರು, ಜೈನರು, ಲಿಂಗಾಯತರು ಈ ಭಾಗದಲ್ಲಿ ಧಾರ್ಮಿಕ ವಾದ ಶ್ರದ್ದಾಕೇಂದ್ರಗಳ ನಿರ್ಮಿಸಿದ್ದಾರೆ.ಇದಕ್ಕೆ ಉದಾಹರಣೆಯಾಗಿ ಡಂಬಳದ ತೋಂಟದಾರ್ಯಮಠ ಮದರ್ದನಾರೀಸ್ವರರು, ದೊಡ್ಡಬಸವೇಶ್ವರ ದೇವಸ್ಥಾನ, ಜಪದ ಬಾವಿಯನ್ನು ಈ ಹೊತ್ತಿಗೂ ನೋಡಬಹುದಾಗಿದೆ.
ಈ ಭಾಗದಲ್ಲಿ ಬ್ರೀಟಿಷರ ಆಡಳಿತದ ರೈತರ ಮೇಲೆ ಹೇರಲಾಗಿದ್ದ ತೆರಿಗೆಯನ್ನು ವಿರೋಧಿಸಿ ಢೋಂಡಿಯಾ ವಾಘನೊಂದಿಗೆ ಕೈಜೋಡಿಸಿದ ಶ್ರೀನಿವಾಸ ವೆಂಕಟಾದ್ರಿ ದೇಸಾಯಿವರು ಬ್ರೀಟೀಷರೊಂದಿಗೆ ಹೋರಾಟವನ್ನು ಮಾಡಿ ಹುತಾತ್ಮರಾಗಿದ್ದಾರೆ. ಈ ಪ್ರದೇಶದ ನೂರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶ ಪ್ರೇಮದ ಕಿಚ್ಚನ್ನು ಹಚ್ಚಿ ಸ್ವಾತಂತ್ರ್ಯವನ್ನು ಪಡೆಯುವ ಮೂಲಕ ನಮ್ಮ ನೆಮ್ಮದಿಯ ಬದುಕಿಗೆ ಕಾರಣಿಕರ್ತರಾಗಿದ್ದಾರೆ ಎಂದು ಗೋಣಿಬಸಪ್ಪ ಕೋರ್ಲಹಳ್ಳಿ ಹೇಳಿದರು.
ಜೆ.ಟಿ.ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟರ ಕಾರ್ಯಕ್ರಮ ಉದ್ವಾಟಿಸಿ ಉದ್ವಾಟಿಸಿ ಮಾತನಾಡಿ . ಡಂಬಳದ ನೆಲವು ಸಾಧು ಸತ್ಪರುಷರು, ಯೋಗಿಗಳು, ಶರಣರು ನೆಲೆಸಿದ ಹೋರಾಟದ ನೆಲೆವೀಡು ಆಗಿದೆ. ಲಿಂ.ತೋಂದ ಸಿದ್ದಲಿಂಗ ಮಹಾಸ್ವಾಮಿಗಳು ವೈಚಾರಿಕ ಪ್ರಜ್ಷೆ ಮತ್ತು ಕನ್ನಡ ಅಸ್ಮೀತೆಯನ್ನು ಬಿತ್ತಿ ಕನ್ನಡದ ಜಗದ್ಗುರು ,ಕೋಮಸೌಹಾರ್ದತೆಯ ಹರಿಕಾರರಾಗಿ ಜನರ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸಿ ಆತ್ಮಾಭಿಮಾನವನ್ನು ಬೆಳೆಸಿದ್ದಾರೆ ಎಂದರು. ಶಿಕ್ಷಕಿ ರಾಮಣ್ಣವರ ಮಾತನಾಡಿದರು.
ಕಸಾಪ ಕೋಶಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ ಲಿಂ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ವೈಚಾರಿಕ ಕ್ರಾಂತಿಯು ನಡಿಗೆ ಮಾದರಿಯಾಗಿದೆ. ಸ್ವಾತಂತ್ರ್ಯದ ನೆನಹು ಕಾರ್ಯಕ್ರಮದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹಕಾರ ನೀಡಲಾಗವದು ಎಂದರು. ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ವಹಿಸಿ ಮಾತನಾಡಿ ಕಸಾಪ ನಿರಂತರ ಸಾಹಿತ್ಯ ಚಟುವಟಿಕೆ ಹಮ್ಮಿಕೊಂಡಿದೆ ಎಂದರು. ಜಿ.ವಿ.ಹಿರೇಮಠ, ಎಂ.ಜಿ.ಮಡಿವಾಳರ, ಶಂಕರ ಕಲ್ಲಿಗನೂರು, ಎ.ಕೆ.ಮುಲ್ಲಾನವರ, ಡಿ.ಕೆ.ಗುಡ್ಲಾನೂರು, ಹು.ಬಾ.ವಡ್ಡಟ್ಟಿ ಕೃಷ್ಣ ಸಾಹುಕಾರ ಉಪಸ್ಥಿತರಿದ್ದರು. ಸಿ.ಕೆ.ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ಹಿರೇಮಠ ಸ್ವಾಗತಿಸಿದರು. ಪ್ರಕಾಶ ತಳವಾರ ನಿರೂಪಿಸಿದರು. ಸುರೇಶ ಬಾವಿಹಳ್ಳಿ ವಂದಿಸಿದರು