ಹುಕ್ಕೇರಿ

ಇಂದಿನಿಂದ ಶ್ರೀವಿಠ್ಠಲದೇವರ ದೇವಸ್ಥಾನ ಶಿಖರದ ಉದ್ಘಾಟನೆ: ಕಳಸಾರೋಹಣ

ಇಂದಿನಿಂದ ಶ್ರೀವಿಠ್ಠಲದೇವರ ದೇವಸ್ಥಾನ ಶಿಖರದ ಉದ್ಘಾಟನೆ: ಕಳಸಾರೋಹಣ

ಇಂದಿನಿಂದ ಶ್ರೀವಿಠ್ಠಲದೇವರ ದೇವಸ್ಥಾನ ಶಿಖರದ ಉದ್ಘಾಟನೆ: ಕಳಸಾರೋಹಣ  

ಬಡಕುಂದ್ರಿ 06: ಹುಕ್ಕೇರಿ ತಾಲೂಕಿನ ಹುನ್ನೂರ ಆರ್‌.ಸಿ ಗ್ರಾಮದೇವರಾದ ಶ್ರೀವಿಠ್ಠಲದೇವರ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ಶಿಖರದ ಉದ್ಘಾಟನೆ ಮತ್ತು ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವವು ಗುರುವಾರ ನ.7ರಿಂದ ಶನಿವಾರ 9.ರವರೆಗೆ ಸಡಗರ ಸಂಭ್ರಮದಿಂದ ಜರುಗಲಿದೆ. 

7ರಂದು ಮಧ್ಯಾಹ್ನ 12.ಗಂಟೆಗೆ ಕುಂಭಮೇಳದೊಂದಿದೆ ಕಳಸದ ಭವ್ಯ ಮೆರವಣಿಗೆ. ರಾತ್ರಿ 10.ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು. 

8ರಂದು ಬೆಳಿಗ್ಗೆ 8.ಗಂಟೆಗೆ ಹೋಮ-ಹವನ ಹಾಗೂ ದೇವರಿಗೆ ಮಹಾರುದ್ರಾಭಿಷೇಕ. ಮಧ್ಯಾಹ್ನ 12.ಗಂಟೆಗೆ ಕಳಸಾರೋಹಣ ಕಾರ್ಯಕ್ರಮ. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಯಮಕನಮರಡಿ ಹುಣಸಿಕೊಳ್ಳಮಠದ ರಾಚೋಟಿ ಸ್ವಾಮೀಜಿ, ಅಥಣಿ ಕವಲಗುಡ್ಡದ ಸಿದ್ದಯೊಗಿ ಅಮರೇಶ್ವರ ಮಹಾರಾಜರು, ಧಾರವಾಡ ಮಣಸೂರಿನ ರೇವಣಸಿದ್ದೇಶ್ವರ ಮಠದ ಡಾ.ಬಸವರಾಜ ದೇವರು, ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಜರುಗಲಿದೆ.  

ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರಾದ ರಮೇಶ ವಿ.ಕತ್ತಿ, ಹುಕ್ಕೇರಿ ಶಾಸಕರಾದ ನಿಖಿಲ ಉ.ಕತ್ತಿ, ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರೀಯಾಂಕಾ ಸ.ಜಾರಕಿಹೊಳಿ ಆಗಮಿಲಿದ್ದಾರೆ. ಮಧ್ಯಾಹ್ನ 1.30ಕ್ಕೆ ದೇವರಿಗೆ ನೈವೇದ್ಯ ನಂತರ ಮಹಾಪ್ರಸಾದ ಜರುಗಲಿದೆ. ಅದೇ ದಿನ ರಾತ್ರಿ 101 ಗ್ರಾಮಗಳ ವಾಲಗ ತಂಡವದರಿಂದ ವಾಲಗ ಬಾರಿಸುವ ಕಾರ್ಯಕ್ರಮ. 

9ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಮಹಾಪ್ರಸಾದ ದೊಂದಿಗೆ ಜಾತ್ರೆ ಮಂಗಲ ಗೊಳ್ಳಲಿದೆ ಎಂದು ಶ್ರೀವಿಠ್ಠಲದೇವರ ಸದ್ಭಕ್ತ ಮಂಡಳಿಯವರು ಪ್ರಕಟನೆಗೆ ತಿಳಿಸಿದ್ದಾರೆ. 


ಶ್ರೀವಿಠ್ಠಲ ದೇವರ ಮಹಿಮೆ: ಘಟಪ್ರಭಾ ಜಲಾಶಯದ ಎಡಭಾಗಯ ಗುಡ್ಡದ ಮೇಲಿರುವ ಹುನ್ನೂರ ಎಂಬ ಪುಟ್ಟ ಗ್ರಾಮದ ಭವ್ಯ ಮಂದಿರದಲ್ಲಿ ನೆಲೆನಿಂತ್ತಿರುವ ಶ್ರೀವಿಠ್ಠಲದೇವರ ಮಹಿಮೆ ಅಪಾರವಾದದ್ದು. ಹುನ್ನೂರ ಗ್ರಾಮದೇವರಾದ ಶ್ರೀವಿಠ್ಠಲದೇವರು ಭಕ್ತಿಭಾವದಿಂದ ಬೇಡಿದ ಭಕ್ತರ ಇಷ್ಟಾರ್ಥ ಕರುಣಿಸುವ ಶಕ್ತಿಸ್ವರೂಪಿ, ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಮಹಾಪೂಜಾ ಕೈಂಕರ್ಯಗಳು ವಿಧಿ, ವಿಧಾನಗಳು ನಡೆಯುತ್ತವೆ. ಪ್ರತಿ ರವಿವಾರ, ಗುರುವಾರ ಹಾಗೂ ಅಮವಾಸ್ಯೆಯ ದಿನದಂದು ನೂರಾರು ಜನ ಭಕ್ತರು ವಿಠ್ಠಲದೇವರ ಸನ್ನಿಧಾನಕ್ಕೆ ಬೇಟ್ಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ತನು ಮನ ದನದಿಂದ ಮೊರೆ ಇಡುವರು. ಶ್ರೀವಿಠ್ಠರಾಯಿಯ ಅನುಗ್ರಹವಾದರೆ ತಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗುವವು ಎಂಬ ಭಕ್ತ ಸಮೂಹದ ಬಲವಾದ ನಂಬಿಕೆ. 


ಸುದ್ದಿ ಓದಿ