ಅಂತರರಾಷ್ಟ್ರೀಯ

ಲಸಿಕೆ ಪಡೆದವರಿಗೆ ಮಾತ್ರ ಇಸ್ರೇಲ್ ನಲ್ಲಿ ಎಲ್ಲೆಡೆ ಮುಕ್ತ ಪ್ರವೇಶ ....!!

ಲಸಿಕೆ ಪಡೆದವರಿಗೆ ಮಾತ್ರ ಇಸ್ರೇಲ್ ನಲ್ಲಿ ಎಲ್ಲೆಡೆ ಮುಕ್ತ ಪ್ರವೇಶ ....!!

ಟೆಲ್ ಅವೀವ್, ಮಾರ್ಚ್ 7 :ಇಸ್ರೇಲ್ ನಲ್ಲಿ ಲಾಕ್‌ಡೌನ್ ತೆರೆವಿನ  ಮೂರನೇ ಹಂತ ಆರಂಭವಾಗಿದ್ದು, .ಕೊರೋನ ವಿರುದ್ಧದ   ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ  ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು ಮತ್ತು ಇತರ ಸ್ಥಳಗಳಲ್ಲಿ ಪ್ರವೇಶ ನೀಡಲಾಗುತ್ತಿದೆ ಎಂದು ದೇಶದ ಸರ್ಕಾರ ತಿಳಿಸಿದೆ. ಶನಿವಾರ ಸರ್ಕಾರಿ ಹೇಳಿಕೆಯ ಪ್ರಕಾರ, ಮೂರನೇ ಹಂತವು ತೆರವು  ಭಾನುವಾರದಿಂದ ಪ್ರಾರಂಭವಾಗುತ್ತದೆ. "ಹಸಿರು ಪಾಸ್‌ಪೋರ್ಟ್‌ಗಳು" ಎಂದು ಕರೆಯಲ್ಪಡುವ ಜನರನ್ನು (ಲಸಿಕೆ ಹಾಕಿದವರಿಗೆ) ಈಗ ರೆಸ್ಟೋರೆಂಟ್‌ಗಳ ಒಳಗೆ ಬರಲು ಅನುಮತಿಸಲಾಗಿದೆ, ಆದರೆ ಲಸಿಕೆ ಹಾಕದವರು ಕೆಲವು ಮಿತಿಗಳೊಂದಿಗೆ ಹೊರಗೆ ಕುಳಿತುಕೊಳ್ಳಬಹುದಾಗಿದೆ. ಚಿತ್ರಮಂದಿರಗಳು, ಕ್ರೀಡಾಂಗಣಗಳು ಮತ್ತು ಈವೆಂಟ್ ಹಾಲ್‌ಗಳು ಸಹ ಕೆಲವು ನಿರ್ಬಂಧಗಳೊಂದಿಗೆ ಮತ್ತೆ ತೆರೆಯುತ್ತಿವೆ. ಸಾಂಸ್ಕೃತಿಕ, ಕ್ರೀಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು  ಒಳಾಂಗಣದಲ್ಲಿ ನಡೆದರೆ 500 ಕ್ಕೂ ಹೆಚ್ಚು ಜನರು ಸೇರದಂತೆ ಮಿತಿ ಹಾಕಲಾಗಿದೆ.ಈವೆಂಟ್ ಹೊರಾಂಗಣದಲ್ಲಿ ನಡೆದರೆ 750 ಕ್ಕಿಂತ ಹೆಚ್ಚು ಜನರು ಹಾಜರಾಗಬಾರದು ಎಂದು ನಿರ್ದೇಶನ ನೀಡಲಾಗಿದೆ.  ಇಸ್ರೇಲಿ ನಾಗರಿಕರು ಮತ್ತು ಖಾಯಂ ನಿವಾಸಿಗಳಿಗೆ ಮಾತ್ರ ಈಗ ಇಸ್ರೇಲ್ ಪ್ರವೇಶಿಸಲು ಸದ್ಯ ಅನುಮತಿ ಕೊಡಲಾಗಿದೆ. 



ಸುದ್ದಿ ಓದಿ