ಅಂತರರಾಷ್ಟ್ರೀಯ

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ: 8 ಜನ ಬಲಿ

ಅಮೆರಿಕದಲ್ಲಿ  ಸಾಮೂಹಿಕ ಗುಂಡಿನ ದಾಳಿ:  8 ಜನ ಬಲಿ

ಇಂಡಿಯಾನಾಪೊಲಿಸ್, ಎಪ್ರಿಲ್ 17 (ಯುಎನ್‌ಐ) ಇಂಡಿಯಾನಾಪೊಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಗುರುವಾರ ಫೆಡ್ಎಕ್ಸ್ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಿಖ್ ಸಮುದಾಯದ ಮಹಿಳೆಯರು ಸೇರಿದಂತೆ  ಒಟ್ಟು 8 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆಯರ ಜೊತೆಗೆ  ಸಿಖ್ ಸಮುದಾಯದ ಓರ್ವ ಪುರುಷ ಸಹ ಸೇರಿದ್ದಾರೆ. ಇಂಡಿಯಾನಾದ ಮಾಜಿ ಫೆಕ್ಸ್‌ಎಕ್ಸ್ ಉದ್ಯೋಗಿ ಬ್ರಾಂಡನ್ ಸ್ಕಾಟ್ ಹೋಲ್ (19) ಪೊಲೀಸರು ಬರುವ ಮುನ್ನ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಎಂದು ಗುರುತಿಸಲಾಗಿದೆ. ಇಂಡಿಯಾನಾ ಇಂಡಿಯಾ ಬಿಸಿನೆಸ್ ಕೌನ್ಸಿಲ್ ಸ್ಥಾಪಕ ಮತ್ತು ಅಧ್ಯಕ್ಷ ರಾಜು ಚಿಂತಾಲಾ ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ಮಹಿಳೆಯರನ್ನು  ಅಮರ್‌ಜಿತ್ ಕೌರ್ ಸೆಖಾನ್, 48, ಜಸ್ವಿಂದರ್ ಕೌರ್, 64, ಅಮರ್ಜಿತ್ ಕೌರ್ ಜೋಹಾಲ್, 66, ಎಂದು ಗುರುತಿಸಲಾಗಿದೆ.


ಸುದ್ದಿ ಓದಿ