ಮೃತ ಕುಟುಂಬಕ್ಕೆ ಪರಿಹಾರ ನಿಧಿ ಚೆಕ್ ವಿತರಿಸಿದ : ಹೆಸ್ಕಾಂ ಅಧ್ಯಕ್ಷ ಖಾದ್ರಿ
Hescom President Qadri distributed relief fund cheques to the deceased family
ಶಿಗ್ಗಾವಿ 20 : ಸವಣೂರ ಐತಿಹಾಸಿಕ ಮೋತಿ ತಲಾಬ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಕಲ್ಲಪ್ಪ ಭೋವಿ ಅವರ ಪತ್ನಿ ರೇಣುಕಾ ಕಲ್ಲಪ್ಪ ಭೋವಿ ಅವರಿಗೆ ಹುಲಗೂರಿನ ತಮ್ಮ ಸ್ವಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳ 2 ಲಕ್ಷ ಪರಿಹಾರ ನಿಧಿ ಚೆಕ್‌ನ್ನು ಹೆಸ್ಕಾಂ ಅಧ್ಯಕ್ಷ, ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖಾದ್ರಿ ನೋಂದವರ ಧ್ವನಿಯಾಗಿಸಿದ್ದರಾಮಯ್ಯನವರ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ನಾನು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲಸ್ವಾಮಿ ಬಂಡಿವಡ್ಡರ, ನಾಗನಗೌಡ ಪೋಲಿಸ್ ಪಾಟೀಲ, ಮಲ್ಲಿಕಾರ್ಜುನ ದೇಸಾಯಿ, ಪಕರುಸಾಬ ಸವಣೂರ, ರುದ್ರೇಶ ಗುಡಗೇರಿ, ಅಡಿವೆಪ್ಪ ಹರಿಜನ, ಸಂಜೀವ ಪಾಳೆದ, ಬಸವರಾಜ ಹಂಚಿನಮನಿ, ಬಿರೇಶ ಜಟ್ಟೆಪ್ಪನವರ ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 