ಅಂತರರಾಷ್ಟ್ರೀಯ

ಕೋವಿಡ್ 19 ಹರಡುವಿಕೆಗೆ ಮೊಲ, ಫೆರೆಟ್ ಬ್ಯಾಜರ್ ಪ್ರಮುಖ ಕಾರಣ : ವಿಶ್ವ ಆರೋಗ್ಯ ಸಂಸ್ಥೆ ತನಿಖಾ ವರದಿ

ಕೋವಿಡ್ 19 ಹರಡುವಿಕೆಗೆ ಮೊಲ, ಫೆರೆಟ್ ಬ್ಯಾಜರ್ ಪ್ರಮುಖ ಕಾರಣ : ವಿಶ್ವ ಆರೋಗ್ಯ ಸಂಸ್ಥೆ ತನಿಖಾ ವರದಿ

ಮಾಸ್ಕೋ, ಫೆ 19: ಫೆರೆಟ್ ಬ್ಯಾಜರ್ ಹಾಗೂ ಮೊಲಗಳ ಮೂಲಕ ಮನುಷ್ಯರಿಗೆ ಕೋವಿಡ್ 19 ಸೋಂಕು ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ವರದಿ ತಿಳಿಸಿದೆ. ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯುಎಚ್‌ಒ ತಜ್ಞರು ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ಮಾರಾಟವಾದ ಫೆರೆಟ್ ಬ್ಯಾಜರ್‌ಗಳು ಮತ್ತು ಮೊಲಗಳು ಮಾನವರಿಗೆ ಕೊರೋನಾ ಸೋಂಕು ಹರಡುವಲ್ಲಿ ಪ್ರಮುಖ ಕಾರಣ ಎಂದು ಹೇಳಿರುವುದಾಗಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆದಾಗ್ಯೂ, ಮಾರುಕಟ್ಟೆಗೆ ಮೊಲಗಳು ಮತ್ತು ಇತರ ಪ್ರಾಣಿಗಳ ಪೂರೈಕೆದಾರರ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ತನಿಖಾಧಿಕಾರಿಗಳು ಮಾರುಕಟ್ಟೆಯಲ್ಲಿ ಕಾನೂನುಬದ್ಧವಾಗಿ ಅಥವಾ ಅಕ್ರಮವಾಗಿ ಮಾರಾಟವಾದ ಜೀವಂತ ಮತ್ತು ಸತ್ತ ಪ್ರಾಣಿಗಳ ಸಂಪೂರ್ಣ ಪಟ್ಟಿಯ ಕುರಿತು ಮತ್ತಷ್ಟು ತನಿಖೆಯಾಗಬೇಕಿದೆ ಎಂದಿದ್ದಾರೆ. ಯುರೋಪಿನಲ್ಲಿ ಮನುಷ್ಯರು ಮತ್ತು ಮಿಂಕ್‌ಗಳ ನಡುವೆ ಸಾರ್ಸ್ –ಕೋವಿಡ್-2ರ ರ ದ್ವಿಮುಖ ಪ್ರಸಾರವನ್ನು ದೃಢಪಡಿಸಿದ ನಂತರ ಚೀನಾ ತನ್ನ ಮಿಂಕ್ ಫಾರ್ಮ್‌ಗಳ ವ್ಯಾಪಕ ಪರೀಕ್ಷೆಯನ್ನು ನಡೆಸಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಕಳೆದ ವಾರ ಚೀನಾದಲ್ಲಿನ ನಾಲ್ಕು ವಾರಗಳ ಪ್ರವಾಸವನ್ನು ಮುಗಿಸಿದ್ದು,  ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿರುವ ಸಾಧ್ಯತೆಯಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ವುಹಾನ್ ಮಾರುಕಟ್ಟೆಯ ಪಾತ್ರವೂ ಸಹ ಸ್ಪಷ್ಟವಾಗಿಲ್ಲ. ತನಿಖಾಧಿಕಾರಿಗಳು ಬಾವಲಿಗಳು ಸಹ ಕೋವಿಡ್ 19 ಹರಡಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. 

  


ಸುದ್ದಿ ಓದಿ