ಅಮೆರಿಕ: 10 ಕೋಟಿ ಜನರಿಗೆ ಕರೋನ ಲಸಿಕೆ
ವಾಷಿಂಗ್ಟನ್, ಮೇ 2 :ಜಗತ್ತಿನಲ್ಲಿ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವ ಅಮೆರಿಕದಲ್ಲಿ ಈವರೆಗೆ 10 ಕೋಟಿ ಜನರಿಗೆ ಕರೋನ ಲಸಿಕೆ ಹಾಕಲಾಗಿದೆ. ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಈ ಕುರಿತು ಮಾಹಿತಿ ನೀಡಿದೆ. ಶನಿವಾರದ ವೇಳೆಗೆ 100 ದಶಲಕ್ಷಕ್ಕೂ ಹೆಚ್ಚು ವಯಸ್ಕ ಅಮೆರಿಕನ್ನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದರಿಂದ ದೇಶದ ಒಟ್ಟು ಜನಸಂಖ್ಯೆಯ 30.ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಸಿಡಿಸಿ ಪ್ರಕಾರ, 144 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕನಿಷ್ಠ ಮೊದಲನೇ ಡೋಸ್ ಲಸಿಕೆ ಪಡೆದಿದ್ದು ಇದು ಜನಸಂಖ್ಯೆಯ 43.6 ಪ್ರತಿಶತದಷ್ಟಿದೆ. ಶನಿವಾರ ಕೇವಲ ಒಂದೇ ದಿನ ದೇಶಾದ್ಯಂತ ಸುಮಾರು 240 ದಶಲಕ್ಷ ಜನರಿಗೆ ಕೋವಿಡ್ ವಿರುದ್ದ ಲಸಿಕೆ ನೀಡಲಾಗಿದೆ ಎಂದೂ ಸಿಡಿಸಿ ಹೊಸದಾಗಿ ಮಾಹಿತಿ ನೀಡಿದೆ.