ಬ್ರೆಜಿಲ್ ನಲ್ಲಿ ಕೋಟಿ ದಾಟಿದ ಸೋಂಕಿತರ ಸಂಖ್ಯೆ
ಮಾಸ್ಕೋ, ಮಾರ್ಚ್ 23 : ಬ್ರೆಜಿಲ್‌ನಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 1ಕೋಟಿ 20 ಲಕ್ಷ ದಾಟಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಒಂದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 49,293ತಲುಪಿದ್ದು, ಪರಿಣಾಮ ಈವರೆಗೆ ಸೋಂಕಿತ ಒಟ್ಟು ಸಂಖ್ಯೆ 12,047,526 ಕ್ಕೆ ಏರಿಕೆಯಾಗಿದೆ ಎಂದೂ ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ ಸೋಂಕಿಗೆ 1383 ಜನರು ಮೃತಪಟ್ಟಿದ್ದು ಈವರೆಗೆ ಮೃತರಪಟ್ಟವರ ಸಂಖ್ಯೆ ದೇಶದಲ್ಲಿ 2ಲಕ್ಷ 95ಸಾವಿರದ 425 ಕ್ಕೆ ತಲುಪಿದೆ ಎಂದೂ ವರದಿ ಹೇಳಿದೆ.