ಸ್ಪುಟ್ನಿಕ್- ವಿ ಲಸಿಕೆಗೆ ಪೂರೈಕೆಗಿಂತ ಜಾಗತಿಕ ಬೇಡಿಕೆ ಅತ್ಯಧಿಕ
ಮಾಸ್ಕೋ, ಜೂನ್ 8: ಸದ್ಯದ ಪೂ ರೈಕೆಗಿಂತ ವಿಶ್ವಾದ್ಯಂತ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಗೆ ಅತಿ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಇಟಲಿ-ರಷ್ಯಾ ವಾಣಿಜ್ಯ ಒಕ್ಕೂಟ(ಸಿಸಿಐಆರ್) ಅಧ್ಯಕ್ಷ ವಿನ್ ಸೆನ್ಜೋ ಟ್ರಾನಿ, ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ರಷ್ಯಾ ನೇರ ಬಂಡವಾಳ ನಿಧಿ(ಆರ್ ಡಿಐಎಫ್) ಮತ್ತು ಅಡೀನ್ ಫಾರ್ಮ ಮತ್ತು ಬಯೋಟೆಕ್ ಔಷಧ ಕಂಪೆನಿ ಸ್ಪುಟ್ನಿಕ್ ವಿ ತಯಾರಿಕೆಯ ಒಪ್ಪಂದಕ್ಕೆ ಇಟಲಿಯಲ್ಲಿ ಸಹಿ ಹಾಕಿದ್ದವು. ಯೂರೋಪ್ ಹೊರತು ಪಡಿಸಿ ವಿಶ್ವದೆಲ್ಲೆಡೆ ಸ್ಪುಟ್ನಿಕ್ ಲಸಿಕೆ ತಯಾರಿಸಿ, ಮಾರಾಟ ಮಾಡಲು ಇದೇ ಇಟಲಿ ಕಂಪೆನಿ ಹಕ್ಕು ಹೊಂದಿದೆ ಎಂದು ಟ್ರಾನಿ ವಿವರಿಸಿದ್ದಾರೆ. ಇದಕ್ಕೆ ಯೂರೋಪ್ ಔಷಧ ಸಂಸ್ಥೆ (ಇಎಂಎ) ಅನುಮತಿ ಅಗತ್ಯವಿರುವುದಿಲ್ಲ. ಆದರೆ, ಯೂರೋಪ್ ನಲ್ಲಿ ಈ ಔಷಧ ಮಾರಾಟ ಮಾಡಲು ಬಯಸಿದರೆ ಅಂತಹ ಕಂಪೆನಿಗೆ ಇಎಂಎ ಅನುಮತಿ ಅಗತ್ಯವಾಗಿರುತ್ತದೆ. ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯ ಲಾಭ ಇಟಲಿ ಕಂಪೆನಿಗೂ ದೊರೆಯಲಿದೆ ಎಂದು ಟ್ರಾನಿ ಹೇಳಿದ್ದಾರೆ.