ರಷ್ಯಾ : ಒಂದೇ ದಿನ 8406 ಕೋವಿಡ್ ಪ್ರಕರಣ ದಾಖಲು
ಮಾಸ್ಕೋ, ಮೇ 24:ರಷ್ಯಾ ಕಳೆದ 24 ಗಂಟೆಗಳಲ್ಲಿ 8,406 ಹೊಸ ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 5,009,911 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ಸೋಮವಾರ ತಿಳಿಸಿದೆ. "ಕಳೆದ ದಿನದಲ್ಲಿ, ರಷ್ಯಾದ 82 ಪ್ರದೇಶಗಳಲ್ಲಿ 8,406 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 1,018 ಪ್ರಕರಣಗಳು ಕ್ಲಿನಿಕಲ್ ಲಕ್ಷಣಗಳನ್ನು ಹೊಂದಿಲ್ಲ" ಎಂದು ಕೇಂದ್ರ ಹೇಳಿದೆ.ಸೋಂಕು ಹೆಚ್ಚಳದ ಪ್ರಮಾಣವು 0.17 ಪ್ರತಿಶತಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ ಮಾಸ್ಕೋ 2,487 ಹೊಸ ಕೊರೋನಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದೆ.ಕಳೆದ 24 ಗಂಟೆಗಳಲ್ಲಿ ರಷ್ಯಾ 319 ಹೊಸ ಸಾವು ಪ್ರಕರಣಗಳನ್ನು ದಾಖಲಿಸಿದ್ದು, ಮೃತರ ಒಟ್ಟು ಸಂಖ್ಯೆ 118,801 ಕ್ಕೆ ಏರಿಕೆಯಾಗಿದೆ. ಇದೇ 24 ಗಂಟೆಗಳಲ್ಲಿ, ದೇಶಾದ್ಯಂತ 6,450 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ ಒಟ್ಟು 4,624,212 ಕ್ಕೆ ತಲುಪಿದೆ.