ಬ್ರೆಜಿಲ್ ನಲ್ಲಿ ಹೆಚ್ಚಿದ ಕರೋನ ಸೋಂಕು ಪ್ರಕರಣ
ಮಾಸ್ಕೋ, ಮೇ 6:ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 73,295 ರಿಂದ 14,930,183 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಸಚಿವಾಲಯದ ಹೊಸ ಮಾಹಿತಿ ಪ್ರಕಾರ, ಇದೆ ಅವಧಿಯಲ್ಲಿ ಸಾವಿನ ಸಂಖ್ಯೆ 2,811 ರಿಂದ 414,399 ಕ್ಕೆ ಏರಿಕೆಯಾಗಿದೆ ದೇಶದಲ್ಲಿ ಏಕಾಏಕಿಸೋಂಕು ಪ್ರಾರಂಭವಾದಾಗಿನಿಂದ 13.52 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಒಂದು ದಿನ ಮೊದಲು ದೇಶದಲ್ಲಿ 77,ಸಾವಿರಕ್ಕೂ ಹೆಚ್ಚು ಹೊಸ ಕರೋನ ಸೋಂಕು ಪ್ರಕರಣಗಳು ಖಚಿತವಾಗಿತ್ತು ಎಂದೂ ಸಚಿವಾಲಯದ ವರದಿ ಹೇಳಿದೆ.