ಜಪಾನ್‌ನಲ್ಲಿ 12-15 ವರ್ಷದ ಮಕ್ಕಳಿಗೆ ಪೈಜರ್ ಲಸಿಕೆ ನೀಡಲು ಅನುಮೋದನೆ
ಟೋಕಿಯೊ, ಜೂನ್ 1 ಜಪಾನ್‌ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪೈಜರ್ ಲಸಿಕೆಯನ್ನು ಜಪಾನ್ ಸರ್ಕಾರ ಅನುಮೋದಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಜಪಾನಿನ ಕ್ಯೋಡೋ ಸುದ್ದಿ ಸಂಸ್ಥೆಯ ಪ್ರಕಾರ, ಹಿರಿಯ ನಾಗರಿಕರಿಗೆ ಲಸಿಕೆ ನೀಡುತ್ತಿರುವುದರಿಂದ ತಕ್ಷಣ ಲಸಿಕೆ ಸಿಗುವುದಿಲ್ಲ. ಜೊತೆಗೆ ಜುಲೈನಲ್ಲಿ ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗುವ ಮೊದಲು ಎಲ್ಲ ವಯಸ್ಕರಿಗೆ ಸಂಪೂರ್ಣ ಲಸಿಕೆ ನೀಡುವ ಪ್ರಯತ್ನ ಚುರುಕುಗೊಳಿಸುವುದಾಗಿ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಭರವಸೆ ನೀಡಿದ್ದಾರೆ .ತಿಂಗಳ ಆರಂಭದಲ್ಲಿ, ಅಮೆರಿಕ ಯುರೋಪಿಯನ್ ಒಕ್ಕೂಟ ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಅನುಮೋದನೆ ನೀಡಿತ್ತು .