ಅಂತರರಾಷ್ಟ್ರೀಯ

ಭಾರತಕ್ಕೆ ವೈದ್ಯಕೀಯ ನೆರವಿನ ಹಸ್ತ ಚಾಚಿದ ಇಸ್ರೇಲ್

ಭಾರತಕ್ಕೆ ವೈದ್ಯಕೀಯ ನೆರವಿನ ಹಸ್ತ ಚಾಚಿದ  ಇಸ್ರೇಲ್

ಟೆಲ್ ಅವೀವ್, ಮೇ 4: ಕರೋನ ಸಂಕಷ್ಟಕ್ಕೆ ತುತ್ತಾಗಿ ಬಹಳ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಇಸ್ರೇಲ್  ವೈದ್ಯಕೀಯ ನೆರವಿನ ಹಸ್ತಚಾಚಿದೆ. ಭಾರತಕ್ಕೆ ಕಷ್ಟಕರ ಕಾಲದಲ್ಲಿ   ತುರ್ತು ನೆರವು ನೀಡುವುದು ಬಹಳ ಅಗತ್ಯವಾಗಿದೆ ಎಂದು  ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಹೇಳಿರುವುದಾಗಿ ಎಂದು  ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ . ವೈಯಕ್ತಿಕ ಆಮ್ಲಜನಕ ಉತ್ಪಾದಕಗಳು, ಔ ಷಧಿಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಸೇರಿದಂತೆ ಇಸ್ರೇಲ್ ಮಂಗಳವಾರ ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ಪೂರೈಸಲಿದೆ ಎಂದೂ  ಸಚಿವಾಲಯ ತಿಳಿಸಿದೆ. 


ಸುದ್ದಿ ಓದಿ