ಅಂತರರಾಷ್ಟ್ರೀಯ

ಬ್ರಿಟನ್‌, ಅಮೆರಿಕದ ಕೋವಿಡ್‌ ಲಸಿಕೆ ನಿಷೇಧಿಸಿದ ಇರಾನ್

ಬ್ರಿಟನ್‌, ಅಮೆರಿಕದ ಕೋವಿಡ್‌ ಲಸಿಕೆ ನಿಷೇಧಿಸಿದ ಇರಾನ್

ಟೆಹ್ರಾನ್, ಜ 8 :ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಬ್ರಿಟನ್‌ ಮತ್ತು ಅಮೆರಿಕದಿಂದ  ಕರೋನವೈರಸ್ ಲಸಿಕೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವುದಾಗಿ ಘೋಷಿಸಿದರು.ಕರೋನವೈರಸ್ಗೆ ಸಂಬಂಧಿಸಿದ ಲಸಿಕೆಗಳನ್ನು ಬ್ರಿಟನ್‌ ಮತ್ತು ಅಮೆರಿಕದಿಂದ  ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಖಮೇನಿ ತಮ್ಮ ಪ್ರಸಾರ ಭಾಷಣದಲ್ಲಿ ಹೇಳಿದರು.ಇರಾನ್ ಪ್ರಸ್ತುತ ಕೋವಿಡ್-19 ವಿರುದ್ಧ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನುಷ್ ಜಹಾನ್ಪುರ್ ನೀಡಿದ ಮಾಹಿತಿಯಂತೆ, ವಸಂತ ಋತುವಿನಲ್ಲಿ ದೇಶವು ತನ್ನ ಮೊದಲ ದೇಶೀಯ ಲಸಿಕೆ ಪಡೆಯುವ ನಿರೀಕ್ಷೆಯಿದೆ.


ಸುದ್ದಿ ಓದಿ