ಅಂತರರಾಷ್ಟ್ರೀಯ

ಇರಾನ್‌ನಲ್ಲಿನಲ್ಲೂ ಹೆಚ್ಚಿದ ಕೊರೋನ ಪ್ರಕರಣಗಳ ಸಂಖ್ಯೆ

ಇರಾನ್‌ನಲ್ಲಿನಲ್ಲೂ ಹೆಚ್ಚಿದ ಕೊರೋನ ಪ್ರಕರಣಗಳ ಸಂಖ್ಯೆ

ಟೆಹ್ರಾನ್, ಮಾರ್ಚ್ 22 :ಇರಾನ್ ನಲ್ಲಿ ಹೊಸದಾಗಿ  7,260 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ 18 ಲಕ್ಷಕ್ಕೆ  ಏರಿಕೆಯಾಗಿದೆ .ಮಾರಕ  ಸಾಂಕ್ರಾಮಿಕ ಜಾಡ್ಯಕ್ಕೆ ಇರಾನ್‌ನಲ್ಲಿ ಈವರೆಗೆ  61,797 ಜನರನ್ನು ಬಲಿ ತೆಗೆದುಕೊಂಡಿದೆ, ಎಂದು ಇರಾನಿನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವಾಲಯದ ವಕ್ತಾರ ಸಿಮಾ ಸದಾತ್ ಲಾರಿ  ತಿಳಿಸಿದ್ದಾರೆ.ಈವರೆಗೆ 1,543,100 ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡು,    ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ, 3,858 ಜನರು ತೀವ್ರ ನಿಗಾ ಘಟಕಗಳಲ್ಲಿದ್ದಾರೆ ಎಂದು ಲಾರಿ ಹೇಳಿದರು. ಇಲ್ಲಿಯವರೆಗೆ, ದೇಶಾದ್ಯಂತ 12.1 ದಶಲಕ್ಷಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದೂ  ವಕ್ತಾರರು ತಿಳಿಸಿದ್ದಾರೆ.


ಸುದ್ದಿ ಓದಿ