ಅಂತರರಾಷ್ಟ್ರೀಯ

ಕರೋನ ನಿಗ್ರಹಿಸಲು ಭಾರತಕ್ಕೆ ಅಗತ್ಯ ನೆರವು: ಜೋ ಬೈಡೆನ್

ಕರೋನ ನಿಗ್ರಹಿಸಲು   ಭಾರತಕ್ಕೆ ಅಗತ್ಯ ನೆರವು:   ಜೋ ಬೈಡೆನ್

ವಾಷಿಂಗ್ಟನ್, ಮೇ 5 :ಕರೋನ ವಿರುದ್ಧ  ಸೆಣಸಲು ಭಾರತಕ್ಕೆ ಅಗತ್ಯ ಸಹಕಾರ,   ನೆರವು  ನೀಡುವುದಾಗಿ ಅಮೆರಿಕ ಅಧ್ಯಕ್ಷ  ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಸ್ಟ್ರಾಜೆನೆಕಾ ಉತ್ಪಾದನಾ ಸಾಮಗ್ರಿಗಳನ್ನು ಭಾರತಕ್ಕೆ ನೀಡಲು  ನಿರ್ದೇಶಿಸಿದ್ದು  ಇದರಿಂದಾಗಿ ಭಾರತವು 20 ದಶಲಕ್ಷಕ್ಕೂ ಹೆಚ್ಚು ಲಸಿಕೆ  ತಯಾರಿಸಬಹುದಾಗಿದೆ ಎಂದು ಹೇಳಿದರು.ಇದರ ಜೊತೆಗೆ ಅಮೆರಿಕ ಭಾರತಕ್ಕೆ  ಅಗತ್ಯ ಯಂತ್ರೋಪಕರಣ ಮತ್ತು ಆಮ್ಲಜನಕವನ್ನು ಕಳುಹಿಸುವ ಮೂಲಕ   ಸಹಾಯ ಮಾಡುತ್ತಿದೆ . ಈ ಸಂಬಂಧ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿರುವುದಾಗಿ ಅವರು ಹೇಳಿದರು. ನಾವು ಭಾರತಕ್ಕೆ ಆಮ್ಲಜನಕ  ಜೊತೆಗೆ ಅಗತ್ಯ ಯಂತ್ರೋಪಕರಣಗಳನ್ನು ಕಳುಹಿಸಲಾಗುತ್ತಿದೆ ಎಂದರು.  ಬೈಡೆನ್  ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶ  ಹೊಂದಿದ್ದ ಅಸ್ಟ್ರಾಜೆನೆಕಾ ಲಸಿಕೆಯನ್ನು ಇತರೆ  ನೆರೆಯ ದೇಶಗಳಾದ  ಕೆನಡಾ ಮತ್ತು ಮೆಕ್ಸಿಕೊ  ನೀಡಲಾಗಿದೆ ಎಂದೂ  ಅಧ್ಯಕ್ಷ ಬೈಡೆನ್ ಹೇಳಿದರು. 


ಸುದ್ದಿ ಓದಿ