ಕರೋನಾ ವಿರುದ್ಧ ಸಮರ, ಮೊದಲ ಡೋಸ್ ಲಸಿಕೆ ಪಡೆದ ಗುಟೆರೆಸ್
ವಿಶ್ವಸಂಸ್ಥೆ, ಜನವರಿ 29: ಕೊರೊನ ಸೋಂಕಿನಿಂದ ಪಾರಾಗಲು ತಾವು ಲಸಿಕೆಯ ಮೊದಲ ಡೋಸ್ ಪಡೆದಿರುವುದಾಗಿ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಬಹಳ ಹೆಮ್ಮೆ ,ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಕೊರೋನ ಲಸಿಕೆ ಪಡೆದಿದ್ದೇನೆ ಇಂದು ನನ್ನಪಾಲಿಗೆ ಸುದಿನ , ನಾನು ಅದೃಷ್ಟಶಾಲಿ ಇದಕ್ಕೆ ಕಾರಣವಾದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದೂ ಗುಟೆರೆಸ್ ಗುರುವಾರ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಲಸಿಕೆ ಪ್ರಪಂಚದಾದ್ಯಂತ ಎಲ್ಲ ಜನತೆಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ಸಾಂಕ್ರಾಮಿಕ ದಿಂದ, ನಾವೆಲ್ಲರೂ ಸುರಕ್ಷಿತವಾಗಿರುವವರೆಗೂ ನಮ್ಮಲ್ಲಿ ಬೇರೆ ಯಾರೂ, ಇತರರು ಸುರಕ್ಷಿತವಾಗಿರಲು ಆಗದು ಆದ್ದರಿಂದ ಯಾರು ಭಯ, ಆತಂಕ ಪಡದೆ ಲಸಿಕೆ ಹಾಕಿಸಿಕೊಂಡು ಕೋರೋನ ತೊಲಗಿಸಬೇಕು ಎಂದೂ ಪ್ರಧಾನ ಕಾರ್ಯದರ್ಶಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು.