ಜರ್ಮನಿಯಲ್ಲಿ ಹೊಸ ಕರೋನ ಪ್ರಕರಣಗಳ ಸಂಖ್ಯೆ ಇಳಿಮುಖ
ಬರ್ಲಿನ್, ಫೆ 5: ಜರ್ಮನಿಯಲ್ಲಿ ಹೊಸ ಕೊರೋನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ ಸಾಧಕ - ಭಾಧಕ ನೋಡಿಕೊಂಡು , ಲಾಕ್‌ಡೌನ್ ಕೊನೆಗೊಳಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಪ್ರಧಾನಿ ಎಂಜೆಲ ಮರ್ಕೆಲ್ ಹೇಳಿದ್ದಾರೆ. ನಾವು ಉತ್ತಮ ಹಾದಿಯಲ್ಲಿದ್ದೇವೆ ಮತ್ತು ಹೊಸ ಪ್ರಕರಣಗಳ ಸಂಖ್ಯೆ ಸ್ಪಷ್ಟವಾಗಿ ಕಡಿಮೆಯಾಗುತ್ತಿದೆ. ಆದರೂ ಆರೋಗ್ಯ ಸಂಸ್ಥೆಗಳು ಸಾಮಾಜಿಕ ಸಂಪರ್ಕಗಳ ಮೇಲೆ ಹಿಡಿತ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದರು.ಏಳು ವಾರಗಳಲ್ಲಿ 100,000 ಜನರ ಪೈಕಿ 50 ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಮರ್ಕೆಲ್ ಗುರುವಾರ ಹೇಳಿದರು. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇಲ್ಲಿಯವರೆಗೆ, ವಿಶ್ವಾದ್ಯಂತ 104.6 ದಶಲಕ್ಷಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 2.27 ದಶಲಕ್ಷಕ್ಕೂ ಹೆಚ್ಚು ಸಾವು-ನೋವುಗಳು ಸಂಭವಿಸಿವೆ ಎಂದೂ ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.