ಅಂತರರಾಷ್ಟ್ರೀಯ

ಕೋವಿಡ್‍-19: ಈಜಿಪ್ಟ್‍ ನಿಂದ ಭಾರತಕ್ಕೆ ವೈದ್ಯಕೀಯ ನೆರವು

ಕೋವಿಡ್‍-19: ಈಜಿಪ್ಟ್‍ ನಿಂದ ಭಾರತಕ್ಕೆ ವೈದ್ಯಕೀಯ ನೆರವು

ಕೈರೋ, ಮೇ 2 : ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ನೆರವಾಗುವ ನಿಟ್ಟಿನಲ್ಲಿ ಭಾರತಕ್ಕೆ 30 ಟನ್ ವೈದ್ಯಕೀಯ ಸರಬರಾಜು ಕಳುಹಿಸಲಾಗುವುದು ಎಂದು ಈಜಿಪ್ಟ್ ಆರೋಗ್ಯ ಸಚಿವ ಹಲಾ ಜಾಯೆದ್ ಶನಿವಾರ ಹೇಳಿದ್ದಾರೆ.300 ಆಮ್ಲಜನಕ ಸಿಲಿಂಡರ್‌ಗಳು, 20 ವೆಂಟಿಲೇಟರ್‌ಗಳು, 100 ವೈದ್ಯಕೀಯ ಹಾಸಿಗೆಗಳು, 20 ಎಲೆಕ್ಟ್ರೋಕಾರ್ಡಿಯೋಗ್ರಫಿ ಯಂತ್ರಗಳು, 30 ಡಿಫಿಬ್ರಿಲೇಟರ್‌ಗಳು ಮತ್ತು 50 ಎಲೆಕ್ಟ್ರಿಕ್ ಸಿರಿಂಜ್ ಪಂಪ್‌ಗಳನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಈಜಿಪ್ಟ್ ಸಶಸ್ತ್ರ ಪಡೆಗಳ ಸಹಕಾರದೊಂದಿಗೆ ವೈದ್ಯಕೀಯ ನೆರವನ್ನು ಭಾರತಕ್ಕೆ ತಲುಪಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ ಕಳೆದ ತಿಂಗಳ 29 ರಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಅವರು ಈಜಿಪ್ಟ್ ಸೇರಿದಂತೆ ಸುಮಾರು 40 ದೇಶಗಳು ಸಾಧ್ಯವಾದಷ್ಟು ಸಾಮರ್ಥ್ಯದಲ್ಲಿ ನೆರವು ನೀಡಲು ಮುಂದಾಗಿವೆ ಎಂದು ಹೇಳಿದ್ದಾರೆ. ಈ ಮಧ್ಯೆ, ಶುಕ್ರವಾರ, ಭಾರತದಲ್ಲಿ 4,01,993 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,91,64,969 ಕ್ಕೆ ಏರಿದೆ. ಇದೇ ಅವಧಿಯಲ್ಲಿ 3,523 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 2,11,853 ಕ್ಕೆ ಏರಿದೆ. 

  

ಸುದ್ದಿ ಓದಿ