ಅಂತರರಾಷ್ಟ್ರೀಯ

ಆಫ್ರಿಕಾದಲ್ಲಿ ಎಬೋಲಾ ತಡೆಗೆ ಸಕಲ ನೆರವು: ಅಮೆರಿಕ ವಾಗ್ದಾನ

ಆಫ್ರಿಕಾದಲ್ಲಿ ಎಬೋಲಾ ತಡೆಗೆ ಸಕಲ ನೆರವು: ಅಮೆರಿಕ ವಾಗ್ದಾನ

ವಾಷಿಂಗ್ಟನ್, ಫೆಬ್ರವರಿ 17:ಆಫ್ರಿಕಾದ ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡ ಎಬೊಲೋ  ಸಾಂಕ್ರಾಮಿಕ ರೋಗ ತಡೆಯಲು ಸಾಧ್ಯವಿರುವ ಸಹಾಯ, ಸಹಕಾರ  ಜೊತೆಗೆ  ಎಲ್ಲಾ ಪ್ರಯತ್ನ ಮಾಡುವುದಾಗಿ ಅಮೆರಿಕ ವಾಗ್ದಾನ ಮಾಡಿದೆ. ಈ ವಿಷಯವನ್ನು  ಶ್ವೇತಭವನದ ವಕ್ತಾರ ಜೆನ್ ಸಾಕಿ ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಂಕ್ರಮಿಕ ರೋಗ ತಡೆಯಲು ಅಮೆರಿಕ ಮತ್ತು ಬೈಡೆನ್ ಆಡಳಿತ ಸಾಧ್ಯವಿರುವ ಎಲ್ಲವನ್ನು  ಮಾಡಲಿದೆ ಎಂದು ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ, ಆಫ್ರಿಕನ್ ಯೂನಿಯನ್ ಮತ್ತು ಆಫ್ರಿಕನ್ ರೋಗ ನಿಯಂತ್ರಣ ಸಂಸ್ಥೆ ಮತ್ತು  ನೆರೆಯ ರಾಜ್ಯಗಳೊಂದಿಗೆ ಸೇರಿ ಕೆಲಸ ಕೆಲಸ ಮಾಡಲಿದೆ  ಎಂದು ಸಾಕಿ ಹೇಳಿದರು . ಗಿನಿಯಾ ಮತ್ತು ಕಾಂಗೋದಲ್ಲಿ  ಕಳದೆ ವಾರ  ಎಬೊಲಾದ ಹೊಸ ಪ್ರಕರಣಗಳು  ಪತ್ತೆಯಾಗಿವೆ ಮಂಗಳವಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಗಿನಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಸಿಯೆರಾ ಲಿಯೋನ್ ಮತ್ತು ಲೈಬೀರಿಯಾದ ರಾಯಭಾರಿಗಳೊಂದಿಗೆ ಮಾತನಾಡಿ ಅಮೆರಿಕ ಸಹಾಯ ಮಾಡುವ ಭರವಸೆ ನೀಡಿದರು. 




ಸುದ್ದಿ ಓದಿ