ಅಂತರರಾಷ್ಟ್ರೀಯ

ಕೋವಿಡ್ 19 : ಜಾಗತಿಕ ಪ್ರಕರಣಗಳ ಸಂಖ್ಯೆ 10.3 ಕೋಟಿಗೂ ಅಧಿಕ

ಕೋವಿಡ್ 19 : ಜಾಗತಿಕ ಪ್ರಕರಣಗಳ ಸಂಖ್ಯೆ 10.3 ಕೋಟಿಗೂ ಅಧಿಕ

ವಾಷಿಂಗ್ಟನ್, ಫೆ 02 :ಜಾಗತಿಕ ಕೋವಿಡ್ 19 ಪ್ರಕರಣಗಳು 10.3 ಕೋಟಿ ದಾಟಿದ್ದು,  ಇದುವರೆಗೆ 22.37 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ.  ಇದೇ ಸಂದರ್ಭದಲ್ಲಿ 5.72 ಕೋಟಿ ಜನರು ಚೇತರಿಸಿಕೊಂಡಿದ್ದಾರೆ ಎಂದು ಅಮೆರಿಕ ಮೂಲದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿರುವ ಮಾಹಿತಿ ತಿಳಿಸಿದೆ. 

ವಿಶ್ವದ 192 ದೇಶಗಳಲ್ಲಿ, ಸೋಂಕುಗಳ ಸಂಖ್ಯೆ 103,395,781 ಕ್ಕೆ ಏರಿದರೆ, 22,3 7,294 ರೋಗಿಗಳು ಇದಕ್ಕೆ ಬಲಿಯಾಗಿದ್ದಾರೆ. ಇಲ್ಲಿನ ಸಂಖ್ಯೆ 2.63 ಕೋಟಿ ದಾಟಿರುವುದರಿಂದ ಅಮೆರಿಕ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರೆದಿದೆ, ಸಾವಿನ ಸಂಖ್ಯೆ 4.43 ಲಕ್ಷಗಳನ್ನು ದಾಟಿದೆ. ಭಾರತದಲ್ಲಿ ಕೋವಿಡ್ 19 ಸೋಂಕಿನ ಪ್ರಮಾಣ 10,76 6,000 ದಾಟಿದ್ದರೆ, 10,4 48,000 ಕ್ಕೂ ಹೆಚ್ಚು ಜನರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ 1,54,486 ಆಗಿದೆ. ಬ್ರೆಜಿಲ್ ನಲ್ಲಿ, 92.29 ಲಕ್ಷಕ್ಕೂ ಹೆಚ್ಚು ಜನರು ವೈರಸ್ ಪೀಡಿತರಾಗಿದ್ದು, ಸುಮಾರು 2.25 ಲಕ್ಷ ಜನರು ಬಲಿಯಾಗಿದ್ದಾರೆ. ಬ್ರಿಟನ್‌ನಲ್ಲಿ ಒಟ್ಟಾರೆ ಕೊರೋನಾ ವೈರಸ್ ಸೋಂಕು 38.4 6 ಲಕ್ಷ ದಾಟಿದ್ದರೆ, 106,7 74 ಜನರು ವೈರಸ್ ಗೆ ಬಲಿಯಾಗಿದ್ದಾರೆ. 

ರಷ್ಯಾದಲ್ಲಿ, ಕರೋನಾ ಸೋಂಕುಗಳ ಸಂಖ್ಯೆ 38.28 ಲಕ್ಷಗಳನ್ನು ದಾಟಿದ್ದರೆ, 72,456 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಫ್ರಾನ್ಸ್‌ನಲ್ಲಿ ಸುಮಾರು 32.60 ಲಕ್ಷ ಜನರು ಈ ವೈರಸ್‌ಗೆ ತುತ್ತಾಗಿದ್ದರೆ, ಅವರಲ್ಲಿ 76,657 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌ನಲ್ಲಿ, ಇದುವರೆಗೂ 28.22 ಕ್ಕೂ ಹೆಚ್ಚು ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 59,081 ಮಂದಿ ಬಲಿಯಾಗಿದ್ದಾರೆ.

  


ಸುದ್ದಿ ಓದಿ