ಜರ್ಮನಿಯಲ್ಲಿ ಲಸಿಕೆ ಪಡೆದವರಿಗೆ ಕೋವಿಡ್ ನಿರ್ಬಂಧ ಸಡಿಲ!
ಮಾಸ್ಕೋ, ಏಪ್ರಿಲ್ 30 : ಕೋವಿಡ್ ನ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರು ಇಲ್ಲವೇ ಸೋಂಕಿನಿಂತ ಚೇತರಿಸಿಕೊಂಡವರಿಗೆ ಕರೋನವೈರಸ್ ನಿರ್ಬಂಧಗಳನ್ನು ಸಡಲಿಸಬಹುದಾದ ಹೊಸ ನಿರ್ಬಂಧಗಳ ಪಟ್ಟಿಯನ್ನು ಜರ್ಮನಿ ಕಾನೂನು ಸಚಿವಾಲಯ ಸಿದ್ಧಪಡಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ.ನಿರ್ಬಂಧಗಳ ಹೊಸ ಕರಡು ಪಟ್ಟಿಯಂತೆ, ಲಾಕ್‍ಡೌನ್ ವೇಳೆ ಲಸಿಕೆ ಹಾಕಿಸಿಕೊಂಡ ಜನರು ರಾತ್ರಿ ವೇಳೆ ಓಡಾಡಲು, ಇತರರೊಂದಿಗೆ ಹತ್ತಿರದ ಸಂಪರ್ಕ ಹೊಂದಲು ಅವಕಾಶವಿರುತ್ತದೆ. ಇಂತಹ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಕಾಪಾಡುವುದು ಮತ್ತು ಮುಖಗವಸು ಧರಿಸುವುದನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಸಚಿವಾಲಯ ಪರಿಶೀಲಿಸುತ್ತಿದೆ. ಈ ಪ್ರಸ್ತಾವನೆಯನ್ನು ಮುಂದಿನ ವಾರ ಸಚಿವ ಸಂಪುಟ ಮತ್ತು ಸಂಸತ್ ನಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಎಂದು ವರದಿಯಾಗಿದೆ.