ಅಂತರರಾಷ್ಟ್ರೀಯ

ವಿಶ್ವಾದ್ಯಂತ 9.5 ಕೋಟಿಗೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ದೃಢ-ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

ವಿಶ್ವಾದ್ಯಂತ 9.5 ಕೋಟಿಗೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ದೃಢ-ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

ವಾಷಿಂಗ್ಟನ್, ಜ 18:ವಿಶ್ವದಾದ್ಯಂತ ಈವರೆಗೆ ದೃಢಪಟ್ಟ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 9.5 ಕೋಟಿ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಇತ್ತೀಚಿನ ಮಾಹಿತಿ ತಿಳಿಸಿದೆ. ಜಾಗತಿಕವಾಗಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 20 ಲಕ್ಷಕ್ಕೂ ಅಧಿಕವಾಗಿದೆ. ವಿಶ್ವಾದ್ಯಂತ ಈವರೆಗೆ ದೃಢಪಟ್ಟ 9,50,03,533 ಕರೋನವೈರಸ್ ಪ್ರಕರಣಗಳಿದ್ದು, ಸಾವಿನ ಸಂಖ್ಯೆ ಸಾವಿನ ಸಂಖ್ಯೆ 20,29,938 ಕ್ಕೆ ತಲುಪಿದೆ. ಮಾರಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 5,22,69,644ರಷ್ಟಿದೆ. ಅತಿಹೆಚ್ಚು ದೃಢಪಟ್ಟ ಕೊರೊನಾವೈರಸ್ ಪ್ರಕರಣಗಳು ಹೊಂದಿರುವ ಮೊದಲ ಮೂರು ರಾಷ್ಟ್ರಗಳಲ್ಲಿ ಅಮೆರಿಕ ಭಾರತ ಮತ್ತು ಬ್ರೆಜಿಲ್ ಸೇರಿವೆ. ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಈವರೆಗೆ 2,39,28,643 ದೃಢಪಟ್ಟ ಪ್ರಕರಣಗಳು ಮತ್ತು 3,97,500 ಸಾವುಗಳು ವರದಿಯಾಗಿವೆ. 


ಸುದ್ದಿ ಓದಿ