ಅಂತರರಾಷ್ಟ್ರೀಯ

ಬ್ರೆಜಿಲ್‍ ನಲ್ಲಿ 1.5 ಕೋಟಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ

ಬ್ರೆಜಿಲ್‍ ನಲ್ಲಿ 1.5 ಕೋಟಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ

ಮಾಸ್ಕೋ, ಮೇ 7 : ಬ್ರೆಜಿಲ್‍ನಲ್ಲಿ ಕಳೆದ 24 ತಾಸಿನಲ್ಲಿ 73,380 ಹೊಸ ಕೋವಿಡ್‍ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,50,03,563ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ 2,550 ಮಂದಿ ಮಾರಕ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ  4,16,949ಕ್ಕೆ ಏರಿದೆ.  ಸೋಂಕು ಉಲ್ಬಣವಾದಾಗಿನಿಂದ ಇದುವರೆಗೆ 1 ಕೋಟಿ 35 ಲಕ್ಷಕ್ಕೂ ಅಧಿಕ ಮಂದಿ ರೋಗದಿಂದ  ಗುಣಮುಖರಾಗಿದ್ದಾರೆ. ಬುಧವಾರ 73,295 ಹೊಸ ಪ್ರಕರಣಗಳು ಹಾಗೂ 2,811ಸಾವುಗಳು ವರದಿಯಾಗಿದ್ದವು. ಪ್ರಕರಣಗಳ ವಿಷಯದಲ್ಲಿ ಬ್ರೆಜಿಲ್‍, ಅಮೆರಿಕ ಮತ್ತು ಭಾರತ ನಂತರ ಎರಡನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂತರ ಎರಡನೇ ಸ್ಥಾನದಲ್ಲಿದೆ.ಕಳೆದ ವರ್ಷದ ಮಾರ್ಚ್‍ 11 ರಂದು ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್ ಸಾಂಕ್ರಾಮಿಕ ಉಲ್ಬಣವನ್ನು ಘೋಷಿಸಿತ್ತು. ಜಾಗತಿಕವಾಗಿ ಇದುವರೆಗೆ 15 ಕೋಟಿ 55 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‍ ಸೋಂಕಿಗೆ ಒಳಗಾಗಿದ್ದು, 32 ಲಕ್ಷ 50 ಸಾವಿರ ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. 


ಸುದ್ದಿ ಓದಿ