ಅಂತರರಾಷ್ಟ್ರೀಯ

ಚೀನಾ: ಸ್ಥಳೀಯವಾಗಿ 5 ಹೊಸ ಸೋಂಕು ಪ್ರಕರಣ ವರದಿ

ಚೀನಾ: ಸ್ಥಳೀಯವಾಗಿ 5 ಹೊಸ ಸೋಂಕು ಪ್ರಕರಣ ವರದಿ

ಬೀಜಿಂಗ್, ಜೂನ್ 7 : ಚೀನಾದ ಮುಖ್ಯ ಭೂಭಾಗದಲ್ಲಿ ಸ್ಥಳೀಯವಾಗಿ 5 ಹೊಸ ಕೊರೊನ ಸೋಂಕು  ಪ್ರಕರಣಗಳು  ಭಾನುವಾರ ವರದಿಯಾಗಿದೆ. ಹೊಸ ಪ್ರಕರಣಗಳೆಲ್ಲವೂ  ಗುವಾಂಗ್‌ಡಾಂಗ್ ಪ್ರಾಂತ್ಯದಿಂದ  ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.ಇದರ ಜೊತೆಗೆ  14 ಹೊಸ ಆಮದು ಪ್ರಕರಣಗಳು ಸಹ ವರದಿಯಾಗಿವೆ , ಅವುಗಳಲ್ಲಿ 4  ಶಾಂಘೈನಲ್ಲಿ, ಗುವಾಂಗ್ಡಾಂಗ್ನಲ್ಲಿ 3, ಜಿಯಾಂಗ್ ಮತ್ತು ಯುನಾನ್ ನಲ್ಲಿ ತಲಾ 2,  ಮತ್ತು ಲಿಯಾನಿಂಗ್, ಹೆನಾನ್ ಮತ್ತು ಸಿಚುವಾನ್ ಪ್ರಕರಣಗಳಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.ಆದರೆ ಕೋವಿಡ್  ಸಂಬಂಧಿಸಿದ ಯಾವುದೇ ಹೊಸ ಸಾವಿನ ಪ್ರಕರಣ  ವರದಿಯಾಗಿಲ್ಲ   ಎಂದೂ  ಆಯೋಗ ಹೇಳಿದೆ.  



ಸುದ್ದಿ ಓದಿ