ಚೀನಾದಲ್ಲಿ 20 ಹೊಸ ಆಮದು ಕೊರೊನಾ ಸೋಂಕು ಪ್ರಕರಣ ವರದಿ
ಬೀಜಿಂಗ್, ಜನವರಿ 27:ಚೀನಾದ ಮುಖ್ಯ ಭೂಭಾಗದಲ್ಲಿ 20 ಹೊಸ ಆಮದು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಪರಿಣಾಮ ಈವರೆಗೆ ಒಟ್ಟು ಆಮದು ಪ್ರಕರಣಗಳ ಸಂಖ್ಯೆ4,644 ಕ್ಕೆ ಏರಿಕೆಯಾಗಿದೆ ಗುವಾಂಗ್‌ಡಾಂಗ್‌ನಲ್ಲಿ ಏಳು, ಶಾಂಘೈನಲ್ಲಿ ಐದು, ಗನ್ಸುನಲ್ಲಿ ನಾಲ್ಕು, ಟಿಯಾಂಜಿನ್‌ನಲ್ಲಿ ಎರಡು ಮತ್ತು ಜಿಯಾಂಗ್ಸು ಮತ್ತು ಸಿಚುವಾನ್‌ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ದೈನಂದಿನ ವರದಿಯಲ್ಲಿ ಹೇಳಿದೆ. ಆಮದು ಮಾಡಿದ ಎಲ್ಲಾ ಪ್ರಕರಣಗಳಲ್ಲಿ, 4,351 ಜನರು ಚೇತರಿಸಿಕೊಂಡ ನಂತರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಮತ್ತು 293 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಯೋಗ ತಿಳಿಸಿದೆ.ಆದರೆ ಆಮದು ಮಾಡಿದ ಪ್ರಕರಣಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದೂ ಹೇಳಲಾಗಿದೆ.