ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ ಹೊಸದಾಗಿ 1,689 ಹೆಚ್ಚು ಕೊರೋನ ಸಾವು

ಬ್ರೆಜಿಲ್ ನಲ್ಲಿ ಹೊಸದಾಗಿ  1,689 ಹೆಚ್ಚು ಕೊರೋನ ಸಾವು

ಬ್ರೆಸಿಲಿಯಾ, ಜೂನ್ 6 : ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ ಹೊಸದಾಗಿ 1,689 ಹೆಚ್ಚು  ಸಾವಿನ ಪ್ರಕರಣ ವರದಿಯಾಗಿದೆ. ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 472,531 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು ಹೊಸದಾಗಿ 66,017 ಹೊಸ ಸೋಂಕುಗಳು ಪತ್ತೆಯಾಗಿದ್ದು, ಒಟ್ಟು ಸೋಂಕು  ಪ್ರಕರಣಗಳು 16,907,425 ಕ್ಕೆ ಏರಿಕೆಯಾಗಿದೆ  ಎಂದೂ  ಸಚಿವಾಲಯ ತಿಳಿಸಿದೆ.ಅಮೆರಿಕ  ನಂತರ  ಬ್ರೆಜಿಲ್ ವಿಶ್ವದ ಎರಡನೇ ಅತಿ ಹೆಚ್ಚು ಕೊರೋನ ಸಾವಿನ ಸಂಖ್ಯೆಯನ್ನು ಹೊಂದಿದ  ದೇಶವಾಗಿದೆ. ನಂತರ  ಭಾರತದ  ಮೂರನೇ ಅತಿದೊಡ್ಡ ಸೋಂಕು ಪ್ರಕರಣ ಹೊಂದಿದ  ದೇಶವಾಗಿದೆ. ದಕ್ಷಿಣ ಅಮೆರಿಕಾದ ದೇಶದಲ್ಲಿ  ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಬ್ರೆಜಿಲ್ ನಲ್ಲಿ  100,000 ನಿವಾಸಿಗಳಿಗೆ ಸಾವಿನ ಪ್ರಮಾಣ 224.9 ರಷ್ಟಿದೆ  ಎಂದೂ  ಸಚಿವಾಲಯದ ವರದಿ  ಹೇಳಿದೆ. 


ಸುದ್ದಿ ಓದಿ