ಅಂತರರಾಷ್ಟ್ರೀಯ

ಬ್ರೆಜಿಲ್ ನಲ್ಲಿ ಕರೋನ ಸೋಂಕಿಗೆ 4 ಲಕ್ಷ ಜನ ಬಲಿ

ಬ್ರೆಜಿಲ್ ನಲ್ಲಿ  ಕರೋನ ಸೋಂಕಿಗೆ  4 ಲಕ್ಷ ಜನ ಬಲಿ

ರಿಯೊ ಡಿ ಜನೈರೊ, ಮೇ 4: ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 983 ಕರೋನ ಹೊಸ ಸಾವಿನ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಪರಿಣಾಮ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 4 ಲಕ್ಷದಾಟಿದೆ ಆರೋಗ್ಯ ಸಚಿವಾಲಯದ  ವರದಿ ಹೇಳಿದೆ. ಇದೇ ಅವಧಿಯಲ್ಲಿ 24,619 ಹೊಸ ಸೋಂಕು ಪ್ರಕರಣ  ಪತ್ತೆಯಾಗಿದೆ. ಅಮೆರಿಕ ನಂತರ  ಬ್ರೆಜಿಲ್ ವಿಶ್ವದ ಎರಡನೇ ಅತಿ ಹೆಚ್ಚು ಸಾವು ನೋವಿಗೆ ಒಳಗಾದ ದೇಶವಾಗಿದೆ. ದಕ್ಷಿಣ ಅಮೆರಿಕಾದ ದೇಶವು ಸಾಂಕ್ರಾಮಿಕ ರೋಗದ ಹೊಸ ಅಲೆಯನ್ನು ಎದುರಿಸುತ್ತಿದೆ, ಇದು ಪ್ರಕರಣಗಳು ಮತ್ತು ಸಾವುಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಳದೆ  ಫೆಬ್ರವರಿ 26, 2020 ರಂದು ದೇಶದಲ್ಲಿ ಮೊದಲ ಕರೋನ  ಪ್ರಕರಣ ದಾಖಲಾಗಿತ್ತು. 


ಸುದ್ದಿ ಓದಿ