ಕೊರೊನಾ ಅಟ್ಟಹಾಸಕ್ಕೆ ನಲುಗಿದ ಬ್ರೆಜಿಲ್
ಮಾಸ್ಕೋ, ಮಾ 18: ಕೊರೊನಾ ಸೋಂಕಿನ ಪಿಡುಗಿನ ಅಟ್ಟಹಾಸಕ್ಕೆ ಬ್ರೆಜಿಲ್ ರಾಷ್ಟ್ರವು ಅಕ್ಷರಶಃ ನಲುಗಿದ್ದು ಅಮೆರಿಕದ ಬಳಿಕ ಅತಿಹೆಚ್ಚು ಕೊವಿಡ್-19 ಸೋಂಕು ಪ್ರಕರಣ ಮತ್ತು ಸಾವಿನ ಪ್ರಕರಣಗಳು ವರದಿಯಾಗಿವೆ.ಕಳೆದ 24 ಗಂಟೆಗಳಲ್ಲೇ 90 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 1,17,00,431ಕ್ಕೆ ಏರಿಕೆಯಾಗಿದೆ.ಬ್ರೆಜಿಲ್ ನಲ್ಲಿ ಒಂದೇ ದಿನ ಕೊವಿಡ್-19 ಸೋಂಕಿಗೆ 2736 ಜನರು ಪ್ರಾಣ ಬಿಟ್ಟಿದ್ದು, ಈವರೆಗೂ ಮಹಾಮಾರಿಗೆ 2,85,136 ಜನರು ಬಲಿಯಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಈವರೆಗೆ 1,02,87,057 ಸೋಂಕಿತರು ಗುಣಮುಖರಾಗಿದ್ದು, 11,28,238 ಸಕ್ರಿಯ ಪ್ರಕರಣಗಳಿವೆ.ವಿಶ್ವದಲ್ಲಿ ಒಂದೇ ದಿನ ಒಟ್ಟು 5,27,664 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಜಗತ್ತಿನಾದ್ಯಂತ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.