ಅಫ್ಘಾನಿಸ್ತಾನದಲ್ಲಿ 1,597 ಹೊಸ ಕೊರೊನ ಪ್ರಕರಣ ವರದಿ
ಕಾಬೂಲ್, ಜೂನ್ 14 : ಅಫ್ಘಾನಿಸ್ತಾನದಲ್ಲಿ 24 ಗಂಟೆಗಳ ಅವಧಿಯಲ್ಲಿ 1,597 ಹೊಸ ಕೊರೋನ ಪ್ರಕರಣ ವರದಿಯಾಗಿದೆ. ಪರಿಣಾಮ ದೇಶದಲ್ಲಿ ಈ ವರೆಗೆ ಸೋಂಕಿತ ಸಂಖ್ಯೆ 91,458 ಕ್ಕೆ ತಲುಪಿಸಿದೆ.ಮತ್ತು ಈವರೆಗೆ 3,612 ಜನರು ಮೃತಪಟ್ಟಿದ್ದಾರೆ. ವರ್ಷ ಫೆಬ್ರವರಿಯಲ್ಲಿ ಸೋಂಕು ಕಾಣಿಸಿಕೊಂಡ 24 ಗಂಟೆಗಳ ಅವಧಿಯಲ್ಲಿ 85 ಸಾವುಗಳು ವರದಿಯಾಗಿತ್ತು ಎಂದು ಸಾರ್ವಜನಿಕ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 471 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಾಗರಿಕರು ಮನೆಯಲ್ಲಿ ಉಳಿಯಲು ಅಥವಾ ಸಾರ್ವಜನಿಕ ಬಸ್ಸುಗಳು, ಮಾರುಕಟ್ಟೆಗಳು ಮತ್ತು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮುಖ ಗವಸು ಹಾಕಲು ಹೇಳಿದ್ದು. ರೋಗನಿರೋಧಕ ಕ್ರಮದ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ.