ಹೆಸ್ಕಾಂ ಕಚೇರಿ ಅಧಿಕಾರಿಗಳ ಬೀಳ್ಕೋಡುಗೆ
Farewell to HESCOM office officials
ಹೆಸ್ಕಾಂ ಕಚೇರಿ ಅಧಿಕಾರಿಗಳ ಬೀಳ್ಕೋಡುಗೆ
ಶಿಗ್ಗಾವಿ : ಹೆಸ್ಕಾಂ ಕಚೇರಿಯ ತಾಂತ್ರಿಕ ಸಹಾಯಕ ಅಧಿಕಾರಿ ವಿನುತಾ ಎಸ್ ಹಾಗೂ ವಿಭಾಗಿಯ ಕಚೇರಿ ಶಿಗ್ಗಾವಿ ಉಪ ವಿಭಾಗದ ತಾಂತ್ರಿಕ ಸಹಾಯಕ ಅಧಿಕಾರಿ ಶಫಿ ಮುಲ್ಲಾ ಅವರನ್ನು ಆತ್ಮೀಯವಾಗಿ ಬಿಳ್ಕೋಡಲಾಯಿತು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಪೂರ್ವ ನಿಯೋಜಿತ ರಾಜ್ಯ ಸಂಘದ ಸದಸ್ಯ ಮಂಜುನಾಥ್ ಮಣ್ಣಣ್ಣವರ ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ಒಂದು ಪ್ರಕ್ರಿಯೆ ಅವರ ಸೇವೆ ಸ್ಮರಣೀಯವಾಗಿರಬೇಕು ವ್ಯವಹಾರಿಕವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಕಾರ್ಯಗಳ ಸೇವೆ ಯಾವುದೇ ಫಲ ಅಪೇಕ್ಷೆ ಇಟ್ಟುಕೊಳ್ಳದೆ ತಮ್ಮ ಕರ್ತವ್ಯ ಹಾಗೂ ಕಾರ್ಯವನ್ನು ನಿರ್ವಹಿಸುವ ಅಧಿಕಾರಿ ವರ್ಗ ಬಹಳ ವಿರಳ ಆದರೆ ವಿನಿತಾ ಎಸ್ ಮತ್ತು ಸಫಿ ಮುಲ್ಲಾ ಅವರು ಇಲಾಖೆ ಹಾಗೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಅನನ್ಯ ಸಂಬಂಧ ಇಟ್ಟುಕೊಂಡು ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಫಲಾಪೇಕ್ಷ ಬಯಸದೆ ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ವರ್ಗಾವಣೆ ಹೊಂದಿರುವುದು ನಿಜಕ್ಕೂ ಬೇಜಾರು ತಂದಿದೆ ಎಂದರು. ಈ ಸಂದರ್ಭದಲ್ಲಿ ನಾಗಯ್ಯ ಹಿರೇಮಠ, ಮುದುಕಪ್ಪ ವನಹಳ್ಳಿ, ಸುರೇಶ್ ಬಿಸನಹಳ್ಳಿ, ಅಬ್ದುಲ್ ಹರಪನಹಳ್ಳಿ, ಕೆ.ಟಿ. ಪಾಟೀಲ, ನವೀನ ಇಂಗಳಗಿ, ಈರಣ್ಣ ಎಲಿಗಾರ, ನವೀನ ಸಾಸನೂರ, ಚಂದ್ರು ಕೋಪರ್ಡೇ, ಹೆಸ್ಕಾಂ ಅಧಿಕಾರಿ ಹಾಗೂ ನೌಕರ ವರ್ಗ ಜೊತೆಗೆ ಗುತ್ತಿಗೆದಾರರು ಉಪಸ್ಥಿತರಿದ್ದರು
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 