ಇಂಡೋನೇಷ್ಯಾ ಪ್ರವಾಹ, 50 ಕ್ಕೂ ಹೆಚ್ಚು ಜನರ ಸಾವು
ಜಕಾರ್ತ, ಏ 5 :ಇಂಡೋನೇಷಿಯಾದ ಪೂರ್ವ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಪ್ರವಾಹ, ಹಲವೆಡೆ ಭೂ ಕುಸಿತ ಉಂಟಾಗಿದೆ. ಜೊತೆಗೆ , ಪ್ರವಾಹಕ್ಕೆ ಸಿಲುಕಿ 50ಕ್ಕೂ ಹೆಚ್ಚು ಜನರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮನೆಗಳುಸೇತುವೆಗಳು ನೀರಿನಲ್ಲಿ ಮುಳುಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ .ಪೂರ್ವ ಫ್ಲೋರೆನ್ಸ್ ರೆಜೆನ್ಸಿ ಪ್ರಾಂತ್ಯದಲ್ಲಿ ಸುಮಾರು 44 ಮಂದಿ ಮೃತಪಟ್ಟಿದ್ದು, 9 ಮಂದಿಗೆ ತೀವ್ರ ಗಾಯಗಳಾಗಳಿವೆ, ಹಲವಾರು ಮಂದಿ ಇನ್ನೂ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವ ರಕ್ಷಣಾ ಕಾರ್ಯಕ್ಕೆ ಮಳೆ ಅಡಚಣೆಯಾಗಿದೆ.ಭಾನುವಾರದಂದು ಈ ಪ್ರಾಂತ್ಯದ ಫ್ಲೊರೆಸ್ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತರು ಈಸ್ಟರ್ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡಿದ್ದರು. ಸಣ್ಣದಾಗಿ ಆರಂಭವಾದ ಮಳೆ ನಂತರ ಭಾರಿ ಜೋರಾಗಿ ಸುರಿಯಲಾರಂಭಿಸಿತು, ಮಳೆ ಜೊತೆಗೆ ತ್ವರಿತ ಗತಿಯ ಪ್ರವಾಹಕ್ಕೆ ಸಿಲುಕಿ ಭೂ ಕುಸಿತ ಹೆಚ್ಚಾಗತೊಡಗಿತು. ಸೇತುವೆ, ರಸ್ತೆಗಳು ನಾಶವಾಗಿದ್ದು, ದ್ವೀಪ ಹಲವು ಭಾಗಗಳಲ್ಲಿನ ಪರಿಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದ್ತಿಯಾ ಜಾತಿ ಹೇಳಿದ್ದಾರೆ.