ಸರ್ಬಿಯಾದಲ್ಲಿ ಬೆಂಕಿ ದುರಂತ: ನಾಲ್ವರು ಮಹಿಳೆಯರು ಸಾವು
ಕ್ರಾಸ್ನೋಯಾರ್ಸ್ಕ್, ಮಾರ್ಚ್ 17: ಸೈಬೀರಿಯಾ ಪ್ರಾಂತ್ಯದ ಕ್ರಾಸ್ನೊಯಾರ್ಸ್ಕ್ ಪ್ರದೇಶದ ಲೆಸೊಸಿಬಿರ್ಸ್ಕ್ ನಲ್ಲಿರುವ ಅಪಾರ್ಟ್‍ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ತುರ್ತು ಸಚಿವಾಲಯದ ಪ್ರಾದೇಶಿಕ ಇಲಾಖೆ ತಿಳಿಸಿದೆ.ಎರಡು ಅಂತಸ್ತಿನ 18 ಫ್ಲಾಟ್ ಗಳಿದ್ದ ಅಪಾರ್ಟ್‍ಮೆಂಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ಅನಾಹುತದಿಂದ ಆರು ಜನರು ಗಾಯಗೊಂಡಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಇಲಾಖೆ ತಿಳಿಸಿರುವುದಾಗಿ ಸ್ಪುಟ್ನಿಕ್ ವರದಿ ಮಾಡಿದೆ.ಬೆಂಕಿಯನ್ನು ನಂದಿಸಲು 37 ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದ್ದರು.