ಬ್ರೆಜಿಲ್ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ, ನಾಲ್ವರ ಸಾವು
ಬ್ಯೂನಸ್ ಏರಿಸ್ , ಮೇ 29:ಪೂರ್ವ ಬ್ರೆಜಿಲ್ ನಗರದ ಅರಕಾಜು, ಸೆರ್ಗಿಪೆ ರಾಜ್ಯದ ಕರೋನಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ನಾಲ್ವರು ಮೃತಪಟಿದ್ದಾರೆ ಎಂದು ಮೇಯರ್ ಎಡ್ವಾಲ್ಡೋ ನೊಗುಯೆರಾ ಹೇಳಿದ್ದಾರೆ.“ಈ ಕಷ್ಟದ ಸಮಯದಲ್ಲಿ ಸಿಸ್ಟರ್ ಪಿವಾ ಆಸ್ಪತ್ರೆಯಲ್ಲಿ ಬೆಂಕಿ ದುರಂತದಿಂದ ತೊಂದರೆಗೆಒಳಗಾದ ರೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ನೆರವು ನೀಡಲು ನಾವು ಎಲ್ಲಾ ಪ್ರಯತ್ನ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈ ಘಟನೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವುದಾಗಿ ನೊಗುಯೆರಾ, ತಮ್ಮ ಟ್ವಿಟ್ಟರ್ ಪುಟದಲ್ಲಿ ಶುಕ್ರವಾರ ತಡವಾಗಿ ಬರೆದುಕೊಂಡಿದ್ದಾರೆ.ಜಿ 1 ಬ್ರಾಡ್‌ಕಾಸ್ಟರ್ ವರದಿಯ ಪ್ರಕಾರ, ಮೃತರ ಪೈಕಿ 77 ವರ್ಷದ ಮಹಿಳೆಯೂ ಸೇರಿದ್ದಾರೆ. ಈ ಘಟನೆ ಜರುಗಿದ ಸಮಯದಲ್ಲಿ ಆಸ್ಪತ್ರೆಯಲ್ಲಿ ಸುಮಾರು 60 ರೋಗಿಗಳಿದ್ದರು ಎಂದೂ ಸ್ಥಳೀಯ ಅಧಿಕಾರಿಗಳು ವರದಿ ಮಾಡಿದ್ದಾರೆ.