ಉತ್ತಮ ಜೀವನಕ್ಕೆ ಶಿಕ್ಷಣವೇ ಬುನಾದಿ: ಎಸ್ ಎಮ್ ಮುಲ್ಲಾ
Education is the foundation for a better life: SM Mulla
ರನ್ನ ಬೆಳಗಲಿ 12: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ.ಮಂಗಳವಾರ ದಂದು ಶೈಕ್ಷಣಿಕ ಮೌಲ್ಯಮಾಪನ ಕಾರ್ಯ ನಿಮಿತ್ಯವಾಗಿ ತಾಲೂಕ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದರು.
ಎಸ್ ಎಮ್ ಮುಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಯು ಉತ್ತಮ ಜೀವನಕ್ಕೆ ಶಿಕ್ಷಣವೇ ಬುನಾದಿ, ಬುನಾದಿ ಶಿಕ್ಷಣವನ್ನು ಪಡೆದರೆ ಮಾತ್ರ ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿ, ಶಾಲಾ ದಾಖಲೆಗಳನ್ನು ಪರೀಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಸರ್ಕಾರ ಹೊರಡಿಸಿದ ಎಲ್ಲ ಯೋಜನೆಗಳನ್ನು ಸಮರ್ಕವಾಗಿ ನಿರ್ವಹಣೆ ಮಾಡುತ್ತಿರುವುದಕ್ಕೆ ಸಂತಸ ಗೊಂಡು, ಶೈಕ್ಷಣಿಕ ಉನ್ನತ ಸಾಧನೆ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕ ವೃಂದಕ್ಕೆ ಮಾರ್ಗದರ್ಶನ ನೀಡಿದರು.
ಇತ್ತೀಚಿಗೆ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಸ್ಪರ್ಧೆಯಲ್ಲಿ ವಿಜೇತಗೊಂಡ ಅನುಶ್ರೀ ಮೂಲಿಮನಿ ಕ್ಲೇ ಮಾಡ್ಲಿಂಗ್ ಪ್ರಥಮ, ಅಲಿಷಾ ಹಳಿಂಗಳಿ ಅರೇಬಿಕ್ ಧಾರ್ಮಿಕ ಪಠಣ ಪ್ರಥಮ, ಸೌಮ್ಯಾ ಜೀರಗಾಳ ಸಂಸ್ಕೃತ ಧಾರ್ಮಿಕ ಪಠಣ ತೃತೀಯ, ಸಂಜನಾ ಅಳ್ಳಿಗಿಡದ ಕವನ/ಪದ್ಯ ವಾಚನ ಪ್ರಥಮ, ಸುಮಯಾ ಅತ್ತಾರ ಅರೇಬಿಕ್ ಧಾರ್ಮಿಕ ಪಟ್ಟಣ ಪ್ರಥಮ, ಶ್ರೀರಕ್ಷಾ ನೀಲಣ್ಣವರ ಆಂಗ್ಲ ಭಾಷಾ ಕಂಠಪಾಠ ದ್ವಿತೀಯ, ಸಹನಾ ಕುಂಬಾರ ಚಿತ್ರಕಲೆ ತೃತೀಯ,
ಸಹನಾ ನಾವಿ ಕನ್ನಡ ಕಂಠಪಾಠ ತೃತೀಯ, ಯಲ್ಲವ್ವ ಲಾಲಸಿಂಗಿ ಹಿಂದಿ ಕಂಠಪಾಠ ಮತ್ತು ಆಸುಭಾಷಣಗಳಲ್ಲಿ ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ನಂತರ ಪ್ರತಿ ತರಗತಿಗಳಿಗೆ ತೆರಳಿದ ಶೈಕ್ಷಣಿಕ ಅಧಿಕಾರಿಗಳಾದ ಸಂಗಮೇಶ ನಿಲಗುಂದ ಬಿ ಆರ್ ಪಿ, ಆಯ್ ಸಿ ಮಠಪತಿ ಇ.ಸಿ. ಓ ಮತ್ತು ಎಮ್ ಎಚ್ ಅಲ್ಲಾಸ್ ಸಿ.ಆರಿ್ಪ ಪ್ರತಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರೀಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ,ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವದೋದಿಂಗೆ ಕಲಿಕೆ ಮುಂದುವರೆಯಲಿ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಆರ್ ಡಿ ಗಲಗಲಿ, ಆರ್ ಡಿ ಬಂಡಿ, ಎಸ್ ಎಚ್ ಮಾದರ, ಎಸ್ ಪಿ ಜೋಶಿ, ಎಚ್ ಬಿ ಜಮಾದಾರ, ರೂಪಾ ದಂಡಿನ, ರಾಘವೇಂದ್ರ ನೀಲಣ್ಣವರ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 