ಕರೋನ, ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆಯಿಂದ ದೂರ ಉಳಿದ ಪ್ರಧಾನಿ
ಮಾಸ್ಕೋ, ಎಪ್ರಿಲ್ 11 (ಯುಎನ್ಐ) ಕೊರೋನ ನಿಯಮಗಳ ಪಾಲನೆಗಾಗಿ ಸಾದ್ಯವಾದಷ್ಟು ಕುಟುಂಬ ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಡೌನಿಂಗ್ ಸ್ಟ್ರೀಟ್ ವಕ್ತಾರರು ತಿಳಿಸಿದ್ದಾರೆ. ಕುಟುಂಬ ಸದಸ್ಯರಿಗೆ ಅವಕಾಶ ಮಾಡಿಕೊಡಲು ಈತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವಕ್ತಾರರು ಶನಿವಾರ ಹೇಳಿದರು , ದಿ ಟೆಲಿಗ್ರಾಫ್ ಉಲ್ಲೇಖಿಸಿದ ವರದಿಯ ಪ್ರಕಾರ ಪ್ರಸ್ತುತ ಕರೋನ ನಿಯಮಗಳು ಮುಂದಿನ ವಾರಾಂತ್ಯದಲ್ಲಿ 30 ಜನರಿಗೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತದೆ. ಶನಿವಾರ, ಬಕಿಂಗ್ಹ್ಯಾಮ್ ಅರಮನೆ ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಯೆ ಇದೆ ದೆ 17 ರಂದು ವಿಂಡ್ಸರ್ನಲ್ಲಿ ನಡೆಯಲಿದೆ ಎಂದು ಘೋಷಿಸಿತು. ಪ್ರಿನ್ಸ್ ಹ್ಯಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮ ವರದಿಗಳು ತಿಳಿಸಿವೆ, ಆದರೆ ಅವರ ಗರ್ಭಿಣಿ ಪತ್ನಿ ಮೇಘನ್ ಅವರು ಪ್ರಯಾಣದಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ ಎಂದೂ ವರದಿಯಾಗಿದೆ.