ಹುಕ್ಕೇರಿ

ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು

ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು


ಹುಕ್ಕೇರಿ  06: ಸಮಾಜಸೇವೆ ಮಾಡಿ ಮಹಾವೀರ ನಿಲಜಗಿ ಅವರಿಗೆ ಡಾ. ವೀರೇಂದ್ರ ಹೆಗಡೆಯವರ ಕಿವಿಮಾತು  ಸುದ್ಧಿ ಜನರು ನಮ್ಮನ್ನು ನಂಬಿ ಅಧಿಕಾರವನ್ನು ಕೊಟ್ಟಿರುತ್ತಾರೆ. ಅಧಿಕಾರ ಬಂದಾಗ ಜನ ಸೇವೆ ಮಾಡುವುದು ತುಂಬಾ ಮುಖ್ಯ. ಮಾಜಿ ಸಂಸದ ರಮೇಶ್ ಕತ್ತಿ ಅವರ ಮಾಜಿ ಸಚಿವ ಎ ಬಿ ಪಾಟೀಲರ, ಶಾಸಕ ನಿಖಿಲ್ ಕತ್ತಿ ಅವರ ನೇತೃತ್ವದಲ್ಲಿ ಜರುಗಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ  ಮಹಾವೀರ್ ವಸಂತ ನಿಲಜಗಿ ಅವರಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಸನ್ಮಾನಿಸಿ ಮಾತನಾಡುತ್ತಾ ಜನ ಮೆಚ್ಚಿ ನಿಮಗೆ ಅಧಿಕಾರವನ್ನು ನೀಡಿರುತ್ತಾರೆ ಜನಸೇವೆಯನ್ನು ಮಾಡುತ್ತಾ ಜನಮನವನ್ನ ಗೆಲ್ಲಿರಿ ಎಂದು ಆಶೀರ್ವದಿಸಿ ಕಿವಿಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ  ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಹಾವೀರ ನಿಲಜಗಿ ಮನೆತನ ಧರ್ಮಸ್ಥಳದ ಬಗ್ಗೆ ಅಪಾರವಾಗಿರುವ ಶ್ರದ್ದೆಯನ್ನು ಇಟ್ಟುಕೊಂಡಿದೆ. ಇವರಿಗೆ ಕ್ಷೆತ್ರದಿಂದ ಆಶೀರ್ವಾದ ಲಭಿಸಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ತಂದೆಯ ಕಾಲದಿಂದಲೂ ನಾವು ಧಾರ್ಮಿಕವಾಗಿ ಬೆಳೆಯುತ್ತಾ ಬಂದಿದ್ದೇವೆ. ಇವತ್ತು ಸ್ಥಾನಮಾನ ಲಭಿಸಿರುವುದು ಜನರ ಆಶೀರ್ವಾದ, ಧರ್ಮಕ್ಷೇತ್ರಗಳ ಆಶೀರ್ವಾದ ಎಂದರು. 


ಸುದ್ದಿ ಓದಿ