ಅಕ್ರಮ ಮರಳು ದಂದೆ: ಜಿಲ್ಲಾಧಿಕಾರಿ ದಿಢೀರ್ ಭೇಟಿ
ರಾಣೇಬೆನ್ನೂರ 11- ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಮರಳು ಸಂಗ್ರಹಿಸುವ ಕೇಂದ್ರವೊಂದಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಕರ್ಾರದ ನಿಯಮ ಮೀರಿ ನದಿಯಿಂದ ಮರಳು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ ಮರಳು ತುಂಬುವ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ, ಯಂತ್ರಗಳನ್ನು ಬಳಸಿ ನದಿಯಿಂದ ಮರಳನ್ನು ಹೊರ ತೆಗೆಯಬಾರದು, ಈ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಪ್ರಕೃತಿಯ ಸಂಪತ್ತು ರಕ್ಷಿಸಿಸುವುದು ಎಲ್ಲರ ಹೊಣೆಯಾಗಿದೆ ಎಂದರು.
ಮರಳು ಸಂಗ್ರಹಿಸುವ 3ನೇ ಕೇಂದ್ರದಲ್ಲಿ ಇದ್ದಂತಹ 2 ಜೆಸಿಬಿ, 1 ಇಟಾಚಿ, 1 ಟ್ರ್ಯಾಕ್ಟರ್, ಮೂರು ಸ್ಯಾಂಡ್ ಪಿಲ್ಟರ್ ಮಾಡುವ ಆಯಿಲ್ ಮೆಷಿನ್ಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದರು. ತಹಶೀಲ್ದಾರ್ ಸಿ.ಎಸ್.ಕುಲಕಣರ್ಿ, ಸಿಪಿಐ ಸುರೇಶ್ ಸಗರಿ, ಕಂದಾಯ ನಿರೀಕ್ಷಕ ಎಚ್.ಕೆ.ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ಯುವರಾಜ್ ನಾಯ್ಕ, ಪ್ರಕಾಶ್ ಮತ್ತಿತರರು ಸೇರಿದಂತೆ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 