ಅಡ್ಡ ಪರಿಣಾಮ: ನೆದರ್‌ಲ್ಯಾಂಡ್ ನಲ್ಲಿ ಅಸ್ಟ್ರಾಜೆನೆಕಾ ಲಸಿಕೆ ಬಳಕೆ ಸ್ಥಗಿತ
ಆಮ್ಸ್ಟರ್‌ಡ್ಯಾಮ್, ಮಾರ್ಚ್ 15: ಕರೋನ ಲಸಿಕೆಯ ಅಡ್ಡ ಪರಿಣಾಮ ಕಾರಣ ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ ಇದೇ 28 ರವರೆಗೆ ಅಸ್ಟ್ರಾಜೆನೆಕಾದ ಕೋವಿಡ್ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಿದ್ದಾಗಿ ನೆದರ್‌ಲ್ಯಾಂಡ್ಸ್ ಭಾನುವಾರ ತಿಳಿಸಿದೆ. ಹೊಸ ಮಾಹಿತಿಯ ಆಧಾರದ ಮೇಲೆ, ಅಸ್ಟ್ರಾಜೆನೆಕಾ ಕರೋನಾ ಲಸಿಕೆಯ ಬಳಕೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಡಚ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಇದೇ 28 ರವರೆಗೆ ಮುಂದಿನ ಎರಡು ವಾರಗಳಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಬಳಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಹೆಪ್ಪುಗಟ್ಟುವಿಕೆಯಸೇರಿದಂತೆ ಕೆಲವು ಸಂಭವನೀಯ ಗಂಭೀರ ಅಡ್ಡಪರಿಣಾಮಗಳ ಒಟ್ಟು 6 ಪ್ರಕರಣಗಳು ಡೆನ್ಮಾರ್ಕ್ ಮತ್ತು ನಾರ್ವೆಯಿಂದ ಸ್ವೀಕರಿಸಲಾಗಿದೆ ಎಂದೂ ಹೇಳಲಾಗಿದೆ.