ಯೆಮನ್ ಯುದ್ಧಕೊನೆಗೊಳಿಸುವ ಬಗ್ಗೆ ಸೌದಿ - ಅಮೆರಿಕ ಮಾತುಕತೆ
ವಾಷಿಂಗ್ಟನ್, ಜೂನ್ 3: ಯೆಮನ್‌ನಲ್ಲಿನ ನಾಗರಿಕ ಸಮರ ಕೊನೆಗೊಳಿಸುವುದರ ಬಗ್ಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಅವರ ಸೌದಿ ಅರೇಬಿಯಾದ ನಾಯಕರ ಸಮಾಲೋಚನೆ ನಡೆಸಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.ನಿನ್ನೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ. ಆಸ್ಟಿನ್ ಅವರು ಸೌದಿ ರಕ್ಷಣಾ ಸಚಿವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಅವರು ಪ್ರಾದೇಶಿಕ ಭದ್ರತೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಯೆಮನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳ ಕುರಿತು ಮಾತುಕತೆ ನಡೆದಿದೆ. ಹೌತಿ ದಾಳಿಯ ಕಾರಣ ಸೌದಿ ಅರೇಬಿಯಾದ ರಕ್ಷಣೆಯನ್ನು ಹೆಚ್ಚಿಸಲು ನಡೆಯುತ್ತಿರುವ ದ್ವಿಪಕ್ಷೀಯ ಪ್ರಯತ್ನಗಳ ಬಗ್ಗೆಯೂ ಆಸ್ಟಿನ್ ಬಿನ್ ಸಲ್ಮಾನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದೂ ವಕ್ತಾರ ಜಾನ್ ಕಿರ್ಬಿ ಹೇಳಿದರು.