ದಕ್ಷಿಣ ಕೊರಿಯಾದ ಸೈನಿಕರಿಗೆ ಕರೋನ ಲಸಿಕೆ ಪೂರೈಕೆ : ಬೈಡೆನ್
ವಾಷಿಂಗ್ಟನ್, ಮೇ 22: ಅಮೆರಿಕ ಸೇನೆ ಪಡೆಗಳೊಂದಿಗೆ ನಿಯಮಿತವಾಗಿ ನಿಕಟ ಸಂಪರ್ಕದಲ್ಲಿ ಕೆಲಸ ಮಾಡುವ ದಕ್ಷಿಣ ಕೊರಿಯಾದ ಸೈನಿಕರು, ನಾವಿಕರು ಮತ್ತು ವಾಯುಪಡೆಯ ಯೋಧರಿಗೆ ಕರೋನ ಲಸಿಕೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬೈಡೆನ್ ಘೋಷಿಸಿದ್ದಾರೆ. ಅಮೆರಿಕನ್ ಪಡೆಗಳ ಸುರಕ್ಷತೆ ಗಾಗಿ ಪಕ್ಕದ ದಕ್ಷಿಣ ಕೊರಿಯಾ ಸೇನಾ ಸಿಬ್ಬಂದಿಯ ಆರೋಗ್ಯ ಚೇತರಿಕೆಗಾಗಿ ಲಸಿಕೆಗಳನ್ನು ನೀಡುವುದಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಬೈಡೆನ್ ಪ್ರಕಟಿಸಿದರು.