ಚೌಡೇಶ್ವರಿ ದೇವಿ ಜಾತ್ರೋತ್ಸವ
Chowdeshwari Devi Festival
ಚೌಡೇಶ್ವರಿ ದೇವಿ ಜಾತ್ರೋತ್ಸವವು
ರಾಣೇಬೆನ್ನೂರು 12: ತಾಲೂಕಿನ ಹುಲಿಕಟ್ಟಿ ಗ್ರಾಮದ ಬೀರಲಿಂಗೇಶ್ವರ ದೇವರ ಹಾಗೂ ಚೌಡೇಶ್ವರಿ ದೇವಿ ದುರ್ಗಾದೇವಿ ದೇವಿಯರ ವಾರ್ಷಿಕ ಸಂಪ್ರದಾಯದ ಜಾತ್ರೋತ್ಸವವು ಹತ್ತಾರು ಸಾವಿರ ಭಕ್ತಾದಿಗಳ ಮಧ್ಯೆ ನೆರವೇರಿಸಲಾಯಿತು. ಸೋಮವಾರ ಮುಂಜಾನೆ ಗ್ರಾಮದ ಎಲ್ಲಾ ದೇವಾನುದೇವತೆಗಳ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೋತ್ಸವದ ನಿಮಿತ್ತ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿ ವಿಶೇಷ ಅಲಂಕಾರ, ಮಾಡಲಾಗಿತ್ತುಹಬ್ಬದ ಸಂಭ್ರಮ ಉತ್ಸಾಹದೊಂದಿಗೆ ನೆರವೇರಿದ ಜಾತ್ರೆಯಲ್ಲಿ ಜಿಲ್ಲೆ ತಾಲೂಕು ಸೇರಿದಂತೆ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸೇವೆ ಮೆರೆದು ಧನ್ಯತೆ ಪಡೆದರು. ಸಂಪ್ರದಾಯದಂತೆ ಸೂರ್ಯೋದಯ ಕಾಲ ಪಂಜಿನ ಪವಾಡ,ಭಕ್ತರಿಂದ ಸಾಮೂಹಿಕ ದೀಡು ನಮಸ್ಕಾರ, ಉರುಳು ಸೇವೆ ಸಲ್ಲಿಸಿ ದೇವರಿಗೆ ಹರಕೆ ನೈವೇದ್ಯ ಸಮರ್ಿಸಿದರು. ಮಧ್ಯಾನ 12-00 ಗಂಟೆಗೆ ಗುಡದಯ್ಯನ ವಾಲಗ, ಭಕ್ತಾದಿಗಳಿಗೆ ವಾರದಿಂದ ಕುಡಿ ಇಟ್ಟಿರುವ ಹಾಲಿನ ಕೊಡ ಪೂಜೆ ನೆರವೇರಿಸಿದರು. ಹಣ್ಣು ತುಪ್ಪ ವಿತರಿಸಿ ಅನಂತರ ಗ್ರಾಮದಲ್ಲಿ ಬೆಲ್ಲದ ಬಂಡೆಯಿಂದ ಮೆರವಣಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಮುಖಂಡರು ಗ್ರಾಮದ ನಾಗರಿಕರು ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 