ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಝುಲಕ್
Children's carnival in the school premises
ಮಾಂಜರಿ, 25 : ಇಲ್ಲಿ ಬನ್ನಿ, ಇಲ್ಲಿ ಬನ್ನಿ, ಮಾವಸಿ ಅಕ್ಕಾ, ತುಪ್ಪಿನ್ಯಾನ್ ಪೇಡಾ ಕೆಜಿಗೆ 400 ರೂಪಾಯಿ. ಟೆಸ್ಟ್ ನೋಡಿ. ತಗೊಳಿ. ಬಾಸುಂದಿ ಕೆಜಿಗೆ 220 ರೂಪಾಯಿ. ಬದನೇಕಾಯಿ ಕೆಜಿಗೆ 80 ರೂಪಾಯಿ. ಮಿರ್ಚಿ 20 ರೂಪಾಯಿ. ಹೀಗೆ ತರಾಕಾರಿ ಸೇರಿ ವಿವಿಧ ವಸ್ತುಗಳನ್ನು ಮಾರಾಟ ಮಾಡ್ತಿರೋದು ಮಕ್ಕಳು. ಅದು ಶಾಲೆಯ ಆವರಣದಲ್ಲಿ. ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿ ಸಾಗರ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಝಲಕ್ ಇದು.
ಇಂದು ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಬೇಕರಿ ಐಟಂ, ಬಿಸ್ಕತ್, ಬ್ರೆಡ್, ಜಾಮ್, ಪಾನಿಪುರಿ, ಬಳೆ, ತರಕಾರಿ, ಹೂ, ಹಣ್ಣು, ಮೆಡಿಕಲ್ ಶಾಪ್, ವಿದ್ಯುತ್ ದೀಪಗಳು, ಕಿರಾಣಿ ಅಂಗಡಿಗಳಂತೂ ಹೆಚ್ಚು ಗಮನ ಸೆಳೆದವು. ಕಾಳು, ಕಡಿ ಅಂಗಡಿಗಳಲ್ಲಿ ಚಿಕ್ಕ ಮಕ್ಕಳು ಪಕ್ಕಾ ಶೆಟ್ರಂತೆ ತಕ್ಕಡಿಯಲ್ಲಿ ಕಾಳುಗಳನ್ನು ತೂಗುತ್ತಿದ್ದರೆ, ನಿಜವಾದ ವ್ಯಾಪಾರಸ್ಥರು ಸಹ ಅಚ್ಚರಿ ಪಡುವಂತಿತ್ತು. ಚಿಕ್ಕ ಮಕ್ಕಳಿಗೆ ಅವರ ತಾಯಂದಿರು ಲೆಕ್ಕ ತೂಕಕ್ಕೆ ಸಹಾಯ ಮಾಡಿದ್ರು
ಸಂತೆಯಲ್ಲಿ ತರಕಾರಿ, ಹಣ್ಣು, ಹೂ ಮತ್ತು ಸೌಂದರ್ಯವರ್ಧಕ ವಸ್ತುಗಳು, ವಿವಿಧ ಬಗೆಯ ಆಟಿಕೆಗಳನ್ನು ಮಾರಾಟಕ್ಕೆ ತಂದಿದ್ದರು. ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಳಸುತ್ತಿದ್ದ ಅನೇಕ ವಸ್ತುಗಳು ಮತ್ತು ಆಟಿಕೆಗಳು ಗಮನ ಸೆಳೆದವು. ಮಕ್ಕಳ ಸಂತೆಗೆ ಆಗಮಿಸಿದ ಪೋಷಕರು ವಸ್ತುಗಳನ್ನು ಖರೀದಿಸಿದರು. ಅಲ್ಲದೇ, ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಚಿಣ್ಣರ ಸಂತೆಗೆ ಪ್ರೋತ್ಸಾಹ ನೀಡಿದರು.
ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನೂ ಬೆಳೆಸುವುದಕ್ಕಾಗಿ ಒಂದು ದಿನದ ಮಕ್ಕಳ ಸಂತೆಯನ್ನ ಆಯೋಜಿಸಲಾಗಿತ್ತು. ಸಂತೆಯಲ್ಲಿ ಹಣ್ಣು- ಹಂಪಲು, ತಿಂಡಿ- ತಿನಿಸು, ಜ್ಯೂಸ್, ಹೋಂ ಮೇಡ್ ಖಾದ್ಯಗಳು, ಐಸ್ ಕ್ರೀಂ ಮುಂತಾದವುಗಳನ್ನು ಮಕ್ಕಳು ಮಾರಾಟ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಂತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ವಾರದ ಸಂತೆ ಎಂದರೆ ಏನು? ಎಂಬ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸುವ ಒಂದು ಪ್ರಯತ್ನ ಇದಾಗಿತ್ತು. ಎಂದು ಸಂಸ್ಥೆಯ ಅಧ್ಯಕ್ಷರಾದ ಸನತ್ ಕುಮಾರ್ ಪಾಟೀಲ್ ಹೇಳಿದರು
ಇಂದು ಅಯೋಜಿಸಲಾದ ಮಕ್ಕಳ ಸಂಖ್ಯೆಯನ್ನು ಸದಲಗಾ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ್ ಉದ್ಘಾಟಿಸಿದರು ಈ ವೇಳೆ ಶಾಲೆಯ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಹಿರಿಯ ನಾಗರಿಕರು ಗ್ರಾಮಸ್ಥರು ಹಾಜರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 